ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಸಾಯಿ' ಕಸಬ್ ಗೆ ಗಲ್ಲು...ಜೈಹೋ ಇಂಡಿಯಾ

By Mrutyunjaya Kalmat
|
Google Oneindia Kannada News

Special courts awards death sentence for Kasab
ಮುಂಬೈ, ಮೇ. 6 : ಮುಂಬೈ ಭಯೋತ್ಪಾದನೆಯಲ್ಲಿ ದೋಷಿಯಾಗಿದ್ದ ಪಾಕಿಸ್ತಾನದ ಉಗ್ರ ಪಾಪಿ ಅಜ್ಮಲ್ ಕಸಬ್ ನಿಗೆ ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ಮರಣದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಮುಂಬೈ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಅತ್ಮಕ್ಕೆ ಶಾಂತಿ ದೊರೆಕಿದ್ದು, ಭಾರತೀಯರ ಒತ್ತಾಯ ಕೊನೆಗೂ ಕೈಗೂಡಿದಂತಾಗಿದೆ.

2008ರ ನವೆಂಬರ್ 26 ರಂದು ನಡೆದ ಮುಂಬೈ ಮಾರಣಹೋಮದಲ್ಲಿ ಸಿಕ್ಕಿಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ಅಂತಿಮ ವಿಚಾರಣೆ ನಡೆಸಿದ್ದ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಂ ಎಲ್ ತೆಹಲಿಯಾನಿ, ಕೊಲೆ, ದೇಶದ ಮೇಲೆ ಸಾರಿದ ಯುದ್ಧ ಆರೋಪದ ಮೇಲೆ ಕಸಬ್ ದೋಷಿ ಎಂದು ಘೋಷಣೆ ಮಾಡಿದ್ದರು. ಶಿಕ್ಷೆ ಪ್ರಮಾಣವನ್ನು ಮೇ 6 ಗುರುವಾರ ಪ್ರಕಟಿಸುವುದಾಗಿ ತಿಳಿಸಿದ್ದರು. ಇಂದು ಆರ್ಥರ್ ರಸ್ತೆಯಲ್ಲಿರುವ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಮೂರ್ತಿ ಎಂ ಎಲ್ ತೆಹಲಿಯಾನಿ, ಉಗ್ರ ಕಸಬ್ ಗಲ್ಲು ಶಿಕ್ಷೆಯನ್ನು ಆದೇಶ ಹೊರಡಿಸಿದ್ದಾರೆ.

ಭಾರತ 115 ಕೋಟಿ ಭಾರತೀಯರ ಕನಸು ಇಂದು ನನಸಾಗಿದೆ. ಹಿರಿಯ ಅಧಿಕಾರಿಗಳು, ಯೋಧರನ್ನು ಸೇರಿ 166 ಮಂದಿಯನ್ನು ಕೊಂದಿದ್ದ ಪಾಕಿಸ್ತಾನದ ಪರೀದಕೋಟ್ ಗ್ರಾಮದ ಕಸಬ್ ನಿರೀಕ್ಷೆಯಂತೆ ಮರಣದಂಡನೆಯೇ ಆಗಿದೆ. ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಅವರ ಪಾತ್ರ ಬಹುಮುಖ್ಯವಾದದ್ದು. ಥ್ಯಾಂಕ್ಸ್ ಟು ನಿಕಂ.

ಇದನ್ನೂ ಓದಿ : ಅಜ್ಮಲ್ ಅಮೀರ್ ಕಸಬ್ ಗೆ ಗಲ್ಲು! ಎಂದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X