ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರೆ ಇದು ನ್ಯಾಯವೇ? ರಾಜದೀಪ್

By Mrutyunjaya Kalmat
|
Google Oneindia Kannada News

Rajdeep Sardesai
ನವದೆಹಲಿ, ಮೇ. 5 : ಪತ್ರಿಕೆಯ ವರದಿಗಾರರಿಂದ ಸುದ್ದಿಯ ಮೂಲವನ್ನು ಬಹಿರಂಗಪಡಿಸುವಂತೆ ಒತ್ತಡ ಹೇರಲು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು ದುರ್ಬಳಿಕೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಕರ್ನಾಟಕ ಪೊಲೀಸರ ಕ್ರಮವನ್ನು ಎಡಿಟರ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷ ಹಾಗೂ ಎನ್ಎನ್-ಐಬಿಎನ್ ಇಂಗ್ಲಿಷ್ ವಾಹಿನಿಯ ಪ್ರದಾನ ಸಂಪಾದಕ ರಾಜದೀಪ್ ಸರ್ ದೇಸಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ಪ್ರತಿನಿಧಿಯು ಸುದ್ದಿಯ ಮೂಲವನ್ನು ಹಾಗೂ ಸುದ್ದಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸಿದವರ ವಿವರಗಳನ್ನು ಬಹಿರಂಗಪಡಿಸಬಾರದು ಎಂಬುದು ವೃತ್ತಿ ಸಂಹಿತೆಯಾಗಿದೆ. ಹೀಗಿದ್ದಾಗೂ ಮಾವೋವಾದಿ ಮುಖಂಡರ ಸಂದರ್ಶನ ಮಾಡಿದ್ದ ಪ್ರಜಾವಾಣಿ ಪತ್ರಿಕೆ ವರದಿಗಾರ ರಾಹುಲ್ ಬೆಳಗಲಿ ಅವರಿಗೆ ಶಿವಮೂಗ್ಗ ಪೊಲೀಸರು ಸುದ್ದಿಯ ಮೂಲವನ್ನು ಬಹಿರಂಗಪಡಿಸುವಂತೆ ಒತ್ತಡ ಹೇರಿದ್ದಾರೆ. ಸುದ್ದಿಯ ಮೂಲವನ್ನು ತಮಗೆ ತಿಳಿಸದಿದ್ದರೆ ಕಾನೂನು ಬಾಹಿರ ತಡೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಕಿಡಿಕಾರಿದರು.

ಬೆಳಗಲಿ ಅವರು ಸುದ್ದಿಯ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದಾಗ ಶಿವಮೂಗ್ಗ ಪೊಲೀಸರು ಪ್ರಜಾವಾಣಿ ಪತ್ರಿಕೆ ಸಹಸಂಪಾದಕ ಪದ್ನರಾಜ ದಂಡಾವತಿ ಅವರಿಗೆ ನೋಟಿಸ್ ಜಾರಿ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ. ಇಬ್ಬರಿಗೂ ಒಂದು ವಾರದಲ್ಲಿ ತಮ್ಮ ಮುಂದೆ ಹಾಜರಾಗಬೇಕು ಎಂದು ಶಿವಮೂಗ್ಗ ಪೊಲೀಸರು ತಾಕೀತು ಮಾಡಿರುವ ಎಲ್ಲಿಯ ನ್ಯಾಯ ಎಂದು ಎಡಿಟರ್ ಗಿಲ್ಡ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ ದೀಪ್ ಸರ್ ದೇಸಾಯಿ ಪ್ರಶ್ನಿಸಿದ್ದಾರೆ.

ಶಿವಮೂಗ್ಗ ಪೊಲೀಸರು ದೌರ್ಜನ್ಯವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸುತ್ತಿರುವ ಶಿವಮೂಗ್ಗ ಡಿವೈಎಸ್ಪಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಹಾಗೂ ಪತ್ರಕರ್ತರ ಬಂಧನಕ್ಕೆ ಹೊರಡಿಸಿರುವ ವಾರೆಂಟನ್ನು, ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದೀರಿ ಎನ್ನುವ ಅಪಾದನೆಯನ್ನೂ ತಕ್ಷಣವೇ ಹಿಂಗೆತೆದುಕೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X