ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡ ಬಾಂಬ್ ಇಟ್ಟವನಿಗೆ ಗಡೀಪಾರು?

By Mahesh
|
Google Oneindia Kannada News

Chellagurki crude bomb case one held
ಬಳ್ಳಾರಿ, ಮೇ 5: ಕರ್ನಾಟಕ - ಆಂಧ್ರದ ಗಡಿಯ ಚೆಳ್ಳಗುರ್ಕಿಯಲ್ಲಿ ನಾಡಬಾಂಬ್ ಇರಿಸಿ ಎದುರಾಳಿ ಅಭ್ಯರ್ಥಿಯನ್ನು ಹೆದರಿಸಲು ವಿಫಲ ಯತ್ನ ನಡೆಸಿದ ಆರೋಪದ ಮೇಲೆ ರೌಡಿಶೀಟರ್ ಚೆಳ್ಳಗುರ್ಕಿ ಅಂಜಿನಪ್ಪನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಚೆಳ್ಳಗುರ್ಕಿ ಅಂಜಿನಪ್ಪ ರೌಡಿಶೀಟರ್ ಅಗಿದ್ದಾನೆ. ಈತನಿಗೆ ಗಡೀಪಾರು ಶಿಕ್ಷೆ ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿ ಶಿಫಾರಸು ಮಾಡಲಾಗಿದೆ. ನಾಡಬಾಂಬ್ ಪತ್ತೆ ಪ್ರಕರಣದಲ್ಲಿ ಆರೋಪಿತರಾಗಿರುವ ಈತನ ಮಗ ಕುಬೇರ ಹಾಗೂ ಇತರರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಹೇಳಿದರು.

ಚೆಳ್ಳಗುರ್ಕಿ ಗ್ರಾಮದ 3, 4 ಮತ್ತು 5ನೇ ವಾರ್ಡ್‌ನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಭಯದ ವಾತಾವರಣ ಮೂಡಿಸಿ ಅವರನ್ನು ಕಣದಿಂದ ನಿವೃತ್ತಿಗೊಳಿಸಿ ತಮ್ಮ ಪರ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಬೇಕು ಎನ್ನುವ ಉದ್ದೇಶಕ್ಕಾಗಿ ಬಂಧಿತನು ಪಿವಿಸಿ ಪೈಪ್‌ನಲ್ಲಿ ಏಳು ಸಜೀವ ನಾಡಬಾಂಬ್‌ಗಳನ್ನು ಇರಿಸಿ ಬಿ. ಎರಿಸ್ವಾಮಿ ಎನ್ನುವವರ ಮನೆಯ ಸಮೀಪದಲ್ಲಿ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸೋಮವಾರ ಬೆಳಗ್ಗೆ ಈ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X