ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲ್ಬ್ ಗಳನ್ನು ಬದಲಿಸಿ ಸಿಎಫ್ಎಲ್ ಕೊಳ್ಳಿ

By Mahesh
|
Google Oneindia Kannada News

Govt set to replace incandescent bulbs by CFLs
ಬೆಂಗಳೂರು, ಮೇ.2:ಜಾಗತಿಕ ತಾಪಮಾನದಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.ಬಚತ್ ಲ್ಯಾಂಪ್ ಯೋಜನಾ ಮೂಲಕ ಬೆಂಗಳೂರು ಗ್ರಾಮೀಣ ಜಿಲ್ಲೆ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ವಿದ್ಯುತ್ ಬಲ್ಬ್ ಬದಲಿಸಿ ಅಭಿಯಾನ ಆರಂಭಿಸಲಿದೆ.

ಈ ಯೋಜನೆಯ ಮೂಲಕ ಗೃಹ ಬಳಕೆಯ ಇನ್ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಬದಲಿಸಿ ಶಕ್ತಿ ಉಳಿಸುವ ಕಂಪ್ಯಾಕ್ಟ್ ಫ್ಲೋರೆಸೆಂಟ್ ಲ್ಯಾಂಪ್ಸ್(ಸಿಎಫ್ ಎಲ್ಸ್ ) ಗಳನ್ನು ಸಬ್ಸಿಡಿ ದರ(ರು.15ರಂತೆ )ದಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಮುಖ್ಯ ಕಾರ್ಯದರ್ಶಿ ಜೈರಾಜ್ ಹೇಳಿದರು.

ಗೃಹ ಬಳಕೆಯ 60 ವ್ಯಾಟ್ ಹಾಗೂ 100 ವ್ಯಾಟ್ ಬಲ್ಬ್ ಬದಲಿದೆ 11ರಿಂದ 15 ವ್ಯಾಟ್ ಮತ್ತು 20ರಿಂದ 25 ವ್ಯಾಟ್ ಸಾಮರ್ಥ್ಯದ ಸಿಎಫ್ಎಲ್ ಗಳನ್ನು ನೀಡಲಾಗುವುದು.ಈ ಯೋಜನೆ ಗ್ರಾಮೀಣ ಭಾಗದ ಸುಮಾರು 25 ಲಕ್ಷ ಗೃಹ ಗ್ರಾಹಕರನ್ನು ತಲುಪುವ ನಿರೀಕ್ಷೆಯಿದೆ.

ಬೆಸ್ಕಾಂ ಈಗಾಗಲೇ ಈ ನಿಟ್ಟಿನಲ್ಲಿ ಟೆಂಡರ್ ಕರೆಯಲಾಗಿದೆ. ಮುಂದೆ ಈ ಯೋಜನೆಯನ್ನು ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.ಸಿಎಫ್ ಎಲ್ ಬಳಕೆಯಿಂದ ಪ್ರತಿ ಗ್ರಾಹಕ ತಿಂಗಳಿಗೆ 5ಯೂನಿಟ್ ವಿದ್ಯುತ್ ಉಳಿತಾಯ ಮಾಡಬಹುದು ಎಂದು ಬೆಸ್ಕಾಂನ ಅಧಿಕಾರಿ ಸತ್ಯಪ್ರೇಮಕುಮಾರ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X