ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ - ಸಿಂಗಪುರ ವಹಿವಾಟು ದ್ವಿಗುಣ ನಿರೀಕ್ಷೆ

By Mahesh
|
Google Oneindia Kannada News

India-Singapore biz set to double: Standard Chartered
ನವದೆಹಲಿ, ಮೇ.4: ಭಾರತ ಹಾಗೂ ಸಿಂಗಪುರದ ವಾಣಿಜ್ಯ ವಹಿವಾಟು ಮುಂದಿನ ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ. ಮುಂದಿನ 5ವರ್ಷಗಳಲ್ಲಿ ಸಿಂಗಪುರದ 700 ಕ್ಕೂ ಅಧಿಕ ಕಂಪೆನಿಗಳು ಭಾರತದಲ್ಲಿ ವಹಿವಾಟು ಆರಂಭಿಸಲಿವೆ ಎಂದು ಸ್ಟಾಂಡಡ್ ಚಾರ್ಟಡ್ ಬ್ಯಾಂಕಿನ ಹಿರಿಯ ಅಧಿಕಾರಿ ರವಿ ಹೇಳಿದ್ದಾರೆ.

ಪ್ರಸ್ತುತ ಸಿಂಗಪುರ ಮೂಲದ ಸುಮಾರು 350 ಕಂಪೆನಿಗಳು ಭಾರತದಲ್ಲಿ ವಹಿವಾಟು ನಡೆಸುತ್ತಿವೆ. ಬ್ಯಾಂಕಿನ ಭಾರತ- ಸಿಂಗಪುರ ವಹಿವಾಟಿನ ವ್ಯವಸ್ಥಾಪಕ ನಿರ್ದೇಶಕ ರವಿ ಮನಚಂದಾ ಪ್ರಕಾರ ಭಾರತದ ಸುಮಾರು 4000 ಕಂಪೆನಿಗಳು ಸಿಂಗಪುರದಲ್ಲಿ ವಹಿವಾಟು ನಡೆಸುತಿದ್ದು ಮುಂದಿನ ಎರಡೂ ವರೆ ವರ್ಷಗಳಲ್ಲಿ ಇವುಗಳ ಸಂಖ್ಯೆ 5500 ಕ್ಕೇರಲಿದೆ. ಪ್ರತಿ ದಿನವೂ ಭಾರತೀಯ ಕಂಪೆನಿಗಳು ಸಿಂಗಪುರದಲ್ಲಿ ಹೊಸ ಕಚೇರಿಗಳನ್ನು ತೆರೆಯುತ್ತಿವೆ ಎಂದು ರವಿ ಹೇಳಿದರು.

ಕಳೆದ ಮೂರು ದಶಕಗಳಿಂದ ಹಾಲೆಂಡ್, ಲಂಡನ್ ಮತ್ತು ಹಾಂಗ್ ಕಾಂಗ್ ನಲ್ಲಿ ಜಾಗತಿಕ ವಾಣಿಜ್ಯ ಮತ್ತು ಹಣಕಾಸು ಉದ್ಯಮದಲ್ಲಿ ಕೆಲಸ ನಿರ್ವಹಿಸಿರುವ ರವಿ ಪ್ರಕಾರ ಸಿಂಗಪುರದಲ್ಲಿ ಕಂಪೆನಿಗಳ ತೆರಿಗೆ ಶೇ.17ರಷ್ಟಿದ್ದು ಇದು ಇತರ ದೇಶಗಳಿಗಿಂತ ಕಡಿಮೆ ಹಾಗೂ ಅಲ್ಲಿ ಹೆಚ್ಚು ತೆರಿಗೆ ಉತ್ತೇಜನ ದೊರೆಯುವುದರಿಂದ ಕಂಪೆನಿಗಳು ಸಿಂಗಪುರದಲ್ಲಿ ವಹಿವಾಟು ನಡೆಸಲು ಆಸಕ್ತಿ ತೋರಿವೆ ಎಂದರು.

ಸಿಂಗಪುರದ ಫ್ರೀ ಟ್ರೇಡ್ ನ ಅನುಕೂಲಗಳನ್ನು ಪಡೆಯಲು ಭಾರತೀಯ ಕಂಪೆನಿಗಳು ಆಸಕ್ತವಾಗಿವೆ ಎಂದ ಅವರು ಸಿಂಗಪುರ ಉದ್ಯಮಿಗಳಿಗೆ ಭಾರತ ಹೆಚ್ಚಿನ ಲಾಭ ನೀಡುವ ಮಾರುಕಟ್ಟೆಯಾಗಿದೆ ಎಂದರು. ಕಳೆದ ಜನವರಿ- ಫೆಬ್ರವರಿ ತಿಂಗಳಿನಲ್ಲಿ ಸಿಂಗಪುರ- ಭಾರತ ದ ದ್ವಿಪಕ್ಷೀಯ ವಹಿವಾಟು ಶೇ.29 ರಷ್ಟು ಹೆಚ್ಚಿದ್ದು ವಹಿವಾಟು 3.31 ಬಿಲಿಯನ್ ಡಾಲರ್ ಗಳಿಂದ 4.26 ಬಿಲಿಯನ್ ಡಾಲರ್ ಗಳಿಗೆ ತಲುಪಿದೆ. ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ ಕಳೆದ ವರ್ಷ ದ್ವಿಪಕ್ಷೀಯ ವಹಿವಾಟಿನಲ್ಲಿ ಶೇ.3 1.5 ರಷ್ಟು ಕುಸಿತ ದಾಖಲಾಗಿತ್ತು. ತೀವ್ರ ಗತಿಯಲ್ಲಿ ಹೆಚ್ಚಿರುವ ಎರಡೂ ರಾಷ್ಟ್ರಗಳ ವ್ಯಾಪಾರ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧಗಳು ಐತಿಹಾಸಿಕ ಎಂದು ರವಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X