ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ರಷ್ಯಾದ ತೈಲ ಕಂಪೆನಿ ಖರೀದಿ

By Mahesh
|
Google Oneindia Kannada News

Minister Jitin Prasada
ನವದೆಹಲಿ, ಮೇ.4:ಭಾರತ ರಷ್ಯಾದ ತೈಲ ಕಂಪೆನಿಯೊಂದನ್ನು ಖರೀದಿಸಿದ್ದು ವೆನಿಜೂಲದ ತೈಲ ನಿಕ್ಷೇಪದಲ್ಲಿಯೂ ಪಾಲು ಪಡೆದಿದೆ ಎಂದು ತೈಲ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯವನ್ನು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ರಷ್ಯಾದ ಇಂಪೀರಿಯಲ್ ಎನರ್ಜಿಯನ್ನು ಖರೀದಿಸಿದೆ ಎಂದು ಹೇಳಿದರು. ಆಯಿಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಒವಿಎಲ್ ವೆನಿಜೂಲದ ತೈಲ ಕಂಪೆನಿಯಲ್ಲಿ ಶೇ.18ಪಾಲು ಪಡೆದಿದೆ ಎಂದೂ ತಿಳಿಸಿದರು. ದೇಶದ ಪ್ರಸ್ತುತ ತೈಲ ಉತ್ಪಾದನೆಯ ಶೇ.25 ರಷ್ಟು ತೈಲ ಸರ್ಕಾರ ಬಾರ್ಮರ್ ಪ್ರದೇಶದಲ್ಲಿ ಸರ್ಕಾರ ಪತ್ತೆ ಹಚ್ಚಿರುವ ತೈಲ ನಿಕ್ಷೇಪಗಳಿಂದ ಸಿಗಲಿದೆ ಎಂದು ಜಿತಿನ್ ಹೇಳಿದರು.

ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿ ಪ್ರಕಾರ ವಿಶ್ವದ ತೈಲ ಉತ್ಪಾದನೆ 2008 ರಲ್ಲಿ ಪ್ರತಿನಿತ್ಯ 83.1ಮಿಲಿಯನ್ ಬ್ಯಾರಲ್ ಗಳಿಂದ 2014-15 ರಲ್ಲಿ ನಿತ್ಯ 86.6 ಮಿಲಿಯನ್ ಬ್ಯಾರೆಲ್ ಗಳಿಗೇರಲಿದ್ದು, 2010ರಲ್ಲಿ 103ಮಿಲಿಯನ್ ಬ್ಯಾರೆಲ್ ಗಳಿಗೇರಲಿದೆ ಎಂದು ಹೇಳಿದೆ. ವಿಶ್ವದ ತೈಲ ಪೂರೈಕೆಯ ಮೇಲೆ ಹೆಚ್ಚು ಅವಲಂಬಿಸದಂತೆ ಸರ್ಕಾರ ದೇಶದಲ್ಲಿ ತೈಲ ನಿಕ್ಷೇಪಗಳ ಶೋಧನೆಗೆ ಹೆಚ್ಚಿನ ಒತ್ತು ನೀಡಿದೆ ಎಂದರು. ಇದಲ್ಲದೆ ಸರ್ಕಾರ ವಿಶಾಖಪಟ್ಟಣ, ಮಂಗಳೂರು, ಮತ್ತು ಪಡೂರಿನಲ್ಲಿ ತೈಲ ಸಂಗ್ರಹ ಸಾಮರ್ಥ್ಯವನ್ನು 5 ಮಿಲಿಯನ್ ಟನ್ ಗಳಿಗೇರಿಸಲಿದೆ ಎಂದು ಸಚಿವ ಜಿತಿನ್ ಪ್ರಸಾದ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X