ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾಗೆ ಲಗ್ಗೆ ಇಟ್ಟ ಟೈಟಾನ್

By Mahesh
|
Google Oneindia Kannada News

Titan to enter South African market
ಮುಂಬೈ, ಮೇ.3:ದೇಶದ ಪ್ರಮುಖ ಕೈ ಗಡಿಯಾರಗಳು ಮತ್ತು ಚಿನ್ನಾಭರಣಗಳ ತಯಾರಕ ಟೈಟಾನ್ ದಕ್ಷಿಣ ಆಫ್ರಿಕಾದ ಮಾರುಕಟ್ಟೆ ಪ್ರವೇಶಿಸಲು ಸಿದ್ದತೆ ನಡೆಸಿದೆ. ತನ್ನ ಗಡಿಯಾರಗಳ ಮಾರಾಟದಿಂದ ಬರುವ ಆದಾಯದಲ್ಲಿ ಶೇ.10 ರಷ್ಟನ್ನು ಮುಂದಿನ 5 ವರ್ಷಗಳಲ್ಲಿ ಆಫ್ರಿಕಾದಿಂದ ಗಳಿಸಲು ಕಂಪೆನಿ ಯೋಜನೆ ಹಾಕಿಕೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಅವರು ಆಫ್ರಿಕಾದಲ್ಲಿ ಈಗಾಗಲೇ ವಿತರಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಆಫ್ರಿಕಾದ ವ್ಯವಹಾರದಲ್ಲಿ ಇವರು ಕಂಪೆನಿಯ ಪಾಲುದಾರರಾಗಿರುತ್ತಾರೆ ಎಂದು ಹೇಳಿದರು.

ಮುಂದಿನ ಹಣಕಾಸು ವರ್ಷದಲ್ಲಿ ಕಂಪೆನಿಯ ಆದಾಯ ಶೇ.20 ರಿಂದ 25 ರಷ್ಟು ಹೆಚ್ಚಲಿದೆ ಎಂದು ಹೇಳಿದ ಅವರು ಕಂಪೆನಿಯ 2009-10 ರ ಆದಾಯದಲ್ಲಿ ಶೇ.57 ರಷ್ಟು ಹೆಚ್ಚಳ ಆಗಿದ್ದು ಒಟ್ಟು ಆದಾಯ 4.7 ಬಿಲಿಯನ್ ರೂಪಾಯಿಗಳಾಗಿವೆ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X