For Daily Alerts
ದಕ್ಷಿಣ ಆಫ್ರಿಕಾಗೆ ಲಗ್ಗೆ ಇಟ್ಟ ಟೈಟಾನ್
ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಅವರು ಆಫ್ರಿಕಾದಲ್ಲಿ ಈಗಾಗಲೇ ವಿತರಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಆಫ್ರಿಕಾದ ವ್ಯವಹಾರದಲ್ಲಿ ಇವರು ಕಂಪೆನಿಯ ಪಾಲುದಾರರಾಗಿರುತ್ತಾರೆ ಎಂದು ಹೇಳಿದರು.
ಮುಂದಿನ ಹಣಕಾಸು ವರ್ಷದಲ್ಲಿ ಕಂಪೆನಿಯ ಆದಾಯ ಶೇ.20 ರಿಂದ 25 ರಷ್ಟು ಹೆಚ್ಚಲಿದೆ ಎಂದು ಹೇಳಿದ ಅವರು ಕಂಪೆನಿಯ 2009-10 ರ ಆದಾಯದಲ್ಲಿ ಶೇ.57 ರಷ್ಟು ಹೆಚ್ಚಳ ಆಗಿದ್ದು ಒಟ್ಟು ಆದಾಯ 4.7 ಬಿಲಿಯನ್ ರೂಪಾಯಿಗಳಾಗಿವೆ ಎಂದು ಹೇಳಿದರು.
Story first published: Monday, May 3, 2010, 17:40 [IST]