ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ಬ್ಯಾಂಕ್ 7 ಸಾವಿರ ಹುದ್ದೆಗಳು ನಿಮಗಾಗಿ

By Mahesh
|
Google Oneindia Kannada News

Chanda Kochchar
ಮುಂಬೈ, ಮೇ.3:ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 7,000 ಮಂದಿಯನ್ನು ನೇಮಕ ಮಾಡಿಕೊಳ್ಳುವ ಯೋಜನೆಯಿದೆ ಎಂದು ಐಸಿಐಸಿಐ ಬ್ಯಾಂಕ್ ಪ್ರಕಟಿಸಿದೆ.

ನಾವು ಸುಮಾರು 5ರಿಂದ 7 ಸಾವಿರ ಜನರನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೇಮಕ ಮಾಡಿಕೊಳ್ಳಲಿದ್ದೇವೆ. ನಮ್ಮ ನೌಕರರಿಗೆ ಬೋನಸ್ ಹಾಗೂ ಸಂಬಳ ಹೆಚ್ಚಳವನ್ನು ಘೋಷಿಸಿದ್ದೇವೆ ಎಂದು ಐಸಿಐಸಿಐ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೋಚರ್ ಸುದ್ದಿಗಾರರಿಗೆ ತಿಳಿಸಿದರು.

ಖಾಸಗಿ ವಲಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ದೊಡ್ಡ ಜಾಲವನ್ನು ಹೊಂದಿರುವ ಐಸಿಐಸಿಐ ಇಂದು ತನ್ನ 2000ನೇ ಶಾಖೆಯನ್ನು ಆರಂಭಿಸಿದೆ. ಈ ಆರ್ಥಿಕ ವರ್ಷದಲ್ಲಿ ಎಟಿಎಂಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡುವುದು, ಹೈಟೆಕ್ ಸೌಲಭ್ಯಗಳಿಂದ ತ್ವರಿತ ಗತಿಯಲ್ಲಿ ಕಾರ್ಯ ನಿರ್ವಹಿಸುವುದು ನಮ್ಮ ಧ್ಯೇಯವಾಗಿದೆ ಎಂದು ಚಂದಾ ಕೋಚರ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X