ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ:ಮತ್ತೆ ಗಗನಕ್ಕೇರಿದ ಗೃಹ ದರಗಳು

By Mahesh
|
Google Oneindia Kannada News

Housing prices in Mumbai aim for the sky
ಮುಂಬೈ,ಮೇ.3: ಜಾಗತಿಕ ಆರ್ಥಿಕ ಹಿಂಜರಿತದಿಂದ ಕುಸಿತಕ್ಕೀಡಾಗಿದ್ದ ಮುಂಬೈನ ಗೃಹ ಉದ್ಯಮ ಈಗ ಚೇತರಿಸಿಕೊಂಡಿದ್ದು ಗೃಹ ದರಗಳು ಮತ್ತೆ ಗಗನಮುಖಿಯಾಗಿವೆ. ಮುಂಬೈನ ಪಾರೆಲ್ ಪ್ರದೇಶದ ಅಶೋಕ್ ಟವರ್ಸ್ ನಲ್ಲಿ ಪ್ರತಿ ಚದರ ಅಡಿ ಜಾಗಕ್ಕೆ ದರ 28 ರಿಂದ 29 ಸಾವಿರ ರುಪಾಯಿಗಳಿಗೆ ಜಿಗಿದಿದೆ.

ಇಲ್ಲಿ 2007-08 ರಲ್ಲಿ ದರಗಳು 16 ರಿಂದ 17 ಸಾವಿರ ರೂಪಾಯಿಗಳಿಗೆ ಕುಸಿದಿದ್ದು, ಶೀಘ್ರ ಚೇತರಿಕೆ ಡೆವಲಪರ್ ಗಳೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ದರ ಏರಿಕೆಯ ಕುರಿತು ರಿಸರ್ವ್ ಬ್ಯಾಂಕು ಕೂಡ ಟಿಪ್ಪಣಿ ಮಾಡಿದ್ದು ದರಗಳು ಆರ್ಥಿಕ ಬಿಕ್ಕಟ್ಟಿನ ಹಿಂದಿನ ದರಕ್ಕಿಂತ ಹೆಚ್ಚಿವೆ ಎಂದು ಹೇಳಿದೆ.

ಮಹಾಲಕ್ಮಿ ಪ್ರದೇಶದ ಸಮೀಪವಿರುವ ಲೋಧಾ ಬೆಲ್ಲಿಸಿಮೊದ ಫ್ಲ್ಯಾಟ್ ಗಳ ದರ ಚದರ ಅಡಿಗೆ ಈಗ 23 ರಿಂದ 24 ಸಾವಿರ ರೂಪಾಯಿಗಳವರೆಗೆ ಮಾರಾಟವಾಗುತ್ತಿದ್ದು ಇದು ಅತೀ ಹೆಚ್ಚಿನ ದರಕ್ಕಿಂತಲೂ ಶೇ.10 ರಷ್ಟು ಅಧಿಕವಾಗಿದೆ. ರಹೇಜ ವಿವಾರಿಯಾ ಅಪಾರ್ಟ್ ಮೆಂಟ್ ಗಳ ದರ ಚದರ ಅಡಿಗೆ 28 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇಲ್ಲಿನ ದರಗಳು ಶೇ.40 ರಷ್ಟು ಕುಸಿತ ದಾಖಲಿಸಿದ್ದವು.

ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಾನಗರಗಳಲ್ಲಿ ಡೆವಲಪರ್ ಗಳು ಬೆಲೆಯನ್ನು ಹೆಚ್ಚಿಸಿದ್ದಾರೆ. 2009 ರ ದ್ವಿತೀಯ ತ್ರೈಮಾಸಿಕದಲ್ಲಿ ಗೃಹ ಖರೀದಿದದಾರರನ್ನು ಸೆಳೆಯಲು ಡೆವಲಪರ್ ಗಳು ಗೃಹದರಗಳನ್ನು ಶೇಕಡಾ 20 ರಿಂದ 30ರಷ್ಟು ಇಳಿಕೆ ಮಾಡಿದ್ದರು. ಇದೀಗ ಪುನಃ ಗೃಹ ದರಗಳನ್ನು ಶೇ.40 ರಷ್ಟು ಹೆಚ್ಚಿಸಲಾಗಿದ್ದು, ಮಾರಾಟ ಶೇ 20 ರಿಂದ 25 ರಷ್ಟು ಕುಸಿದಿದ್ದರೂ ಡೆವಲಪರ್ ಗಳು ದರ ಕಡಿಮೆ ಮಾಡಿಲ್ಲ.

ಕಳೆದ ಮಾರ್ಚ್ ನಲ್ಲಿ ಗೃಹ ಮಾರಾಟದಲ್ಲಿ ಬೆಳವಣಿಗೆ ಆಗದಿದ್ದರೂ ದರಗಳು ಕಡಿಮೆಯಾಗದ ಕುರಿತು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ ಉದ್ಯಮಿಯೊಬ್ಬರು ಮುಂದೆ ಇದು ಗುಳ್ಳೆಯಾಗಿ ಒಡೆಯಲಿದೆ ಎಂದು ಖಚಿತವಾಗಿ ಹೇಳುತ್ತಾರೆ. ಸರ್ಕಾರೀ ಮೂಲಗಳ ಪ್ರಕಾರ ಡೆವಲಪರ್ ಗಳು ಮುಂಬೈನಲ್ಲಿ 75 ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆದಿದ್ದು ಈ ವರ್ಷ ಸಾಲ ಹಾಗೂ ಬಡ್ಡಿಯನ್ನಾಗಿ 25,000 ಕೋಟಿ ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.

ಮುಂಬೈ ಪೂರ್ವ ಮತ್ತು ಪಶ್ಚಿಮ ಸಬ್ ಅರ್ಬ್ ಪ್ರದೇಶಗಳನ್ನು ಸಂಪರ್ಕಿಸುವ ಜೋಗೇಶ್ವರಿ ವಿಕ್ರೋಲಿ ಲಿಂಕ್ ರಸ್ತೆಯ ಸಮೀಪ ಆಪಾರ್ಟ್ ಮೆಂಟ್ ಗಳ ದರ ಪ್ರತೀ ಚದರ ಅಡಿಗೆ 2009 ರಲ್ಲಿ 6200 ರೂಪಾಯಿ ಇದ್ದದ್ದು ಈಗ 10 ಸಾವಿರ ರೂಪಾಯಿ ತಲುಪಿದೆ. ದರಗಳು ಆರ್ಥಿಕ ಹಿಂಜರಿತಕ್ಕೂ ಮೊದಲು ಇಷ್ಟು ಇರಲಿಲ್ಲ ಎನ್ನಲಾಗಿದ್ದು ಇನ್ನು ಸದ್ಯಕ್ಕೆ ದರ ಏರಿಕೆ ಆಗುವದಿಲ್ಲ ಎಂದು ಹೇಳಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X