ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಜಿಲ್ಲೆಯಲ್ಲಿ ಏಳು ನಾಡ ಬಾಂಬ್ ಪತ್ತೆ

By Prasad
|
Google Oneindia Kannada News

7 crude bombs found in Chellagurki village in Bellary district
ಬಳ್ಳಾರಿ, ಮೇ. 3 : ಕರ್ನಾಟಕ - ಆಂಧ್ರದ ಗಡಿಯಲ್ಲಿ ಇರುವ ಚೆಳ್ಳಗುರ್ಕಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಪಿವಿಸಿ ಪೈಪ್‌ನಲ್ಲಿ ಹುದುಗಿಸಿಟ್ಟಿದ್ದಏಳು ನಾಡಬಾಂಬ್‌ಗಳು ಸಿಕ್ಕಿವೆ.

1.5 ಅಡಿ ಉದ್ಧ, 3 ಇಂಚು ವ್ಯಾಸದ ಪಿವಿಸಿ ಪೈಪ್‌ನಲ್ಲಿ ಈ ಬಾಂಬ್‌ಗಳನ್ನು ಇರಿಸಿದ್ದ ದುಷ್ಕರ್ಮಿಗಳು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಎರಿಸ್ವಾಮಿ ಎನ್ನುವವರ ಮನೆಯ ಹಿಂಭಾಗದಲ್ಲಿ ಬಿಸಾಡಿದ್ದರು.

ಅನುಮಾನಾಸ್ಪದವಾಗಿ ಬಿದ್ದಿದ್ದ ಪೈಪ್‌ನ ಒಳಗಿನ ಬಾಂಬ್‌ಗಳ ಸುಳಿವು ದೊರೆತ ಗ್ರಾಮದ ಹಲವರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಜಾಡನ್ನು ಹಿಡಿದು ಹೋಗಿದ್ದ ಪರಮದೇವನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ, ಪೈಪ್‌ನಲ್ಲಿ ಬಾಂಬ್ ಇರುವುದನ್ನು ಖಚಿತಪಡಿಸಿಕೊಂಡರು. ಶ್ವಾನದಳವನ್ನು ಕರೆಯಿಸಿ ಪೈಪನ್ನು ಊರ ಹೊರಗಿನ ನಿರ್ಜನ ಸ್ಥಳಕ್ಕೆ ಸುರಕ್ಷಿತವಾಗಿ ರವಾನೆ ಮಾಡಿದ್ದರು.

ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪಿವಿಸಿ ಪೈಪ್‌ನಲ್ಲಿ ಏಳು ನಾಡಬಾಂಬ್‌ಗಳು ಜೀವಂತವಾಗಿ ಇರುವುದನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ. ಗ್ರಾಮಸ್ಥರು ಒಂದೆಡೆ ನೆಮ್ಮದಿಯ ನಿಟ್ಟಿಸಿರು ಬಿಟ್ಟರೆ ಮತ್ತೊಂದೆಡೆ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮತ್ತೇನಾಗಬಹುದು ಎಂಬ ಆತಂಕ - ಭಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X