ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಹಣೆಬರಹ ನಿರ್ಧಾರಕ್ಕೆ ಕ್ಷಣಗಣನೆ

By Mahesh
|
Google Oneindia Kannada News

ಮುಂಬೈ,ಮೇ.2: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ವಿಧ್ವಂಸಕದಾಳಿ ಹಾಗೂ ಹತ್ಯಾಕಾಂಡದ ಜರುಗಿ 17 ತಿಂಗಳುಗಳ ಬಳಿಕ ನಾಳೆ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಲಿದೆ. ಇದರೊಂದಿಗೆ ಉಗ್ರ ಅಜ್ಮಲ್ ಅಮೀರ್ ಕಸಬ್ ನ ಹಣೆಬರಹ ನಿರ್ಧಾರವಾಗಲಿದೆ.

2008ರ 26/11ರ ಭಯೋತ್ಪಾದನಾ ದಾಳಿಯ ನಡೆಸಿದ ತಂಡದಲ್ಲಿ ಈಗ ಉಳಿದಿರುವ ಏಕೈಕ ಉಗ್ರ ಕಸಬ್ ಜೊತೆಗೆ , ಸಂಚು ರೂಪಿಸಲು ಸಹಕರಿಸಿದ ಭಾರತೀಯ ಹಣೆಬರಹವೂ ನಾಳೆ ತಿಳಿಯಲಿದೆ. ಲಷ್ಕರ್ ಇ ತೋಯ್ಬಾ ಸಂಘಟನೆಯ ಆದೇಶದ ಮೇರೆಗೆ ಫರೀದ್ ಕೋಟ್ ನ ನಿವಾಸಿಯಾಅದ ಕಸಬ್, ತನ್ನೊಂದಿಗೆ ಹತ್ತು ಜನ ಭಯೋತ್ಪಾದಕರನ್ನು ಮುಂಬೈಗೆ ಬಂದು, 26/11ದಾಳಿಯ ನೇತೃತ್ವ ವಹಿಸಿದ್ದ. ಈ ದಾಳಿಯಲ್ಲಿ 25 ವಿದೇಶಿಯರು ಸೇರಿದಂತೆ 166 ಜನರು ಸಾವನ್ನಪ್ಪಿದ್ದರು ಹಾಗೂ 305 ಜನ ಗಾಯಗೊಂಡಿದ್ದರು.

ಭಾರತದ ಫಾಹೀಮ್ ಅನ್ಸಾರಿ ಹಾಗೂ ಸಭಾವುದ್ದೀನ್ ಅಹ್ಮದ್ ಈ ದಾಳಿಯ ಸಂಚು ರೂಪಿಸಿರುವ ಆರೋಪ ಹೊತ್ತಿದ್ದಾರೆ. ಇದಲ್ಲದೆ, ಇತರೆ ಉದ್ದೇಶಿತ ಗುರಿಗಳ ನಕ್ಷೆಯನ್ನು ತಯಾರಿಸಿ ಲಷ್ಕರ್ ಮುಖಂಡರಿಗೆ ರವಾನಿಸಿರುವ ಆರೋಪವು ಇವರ ಮೇಲಿದೆ.ಎಲ್ಲಾ ಆರೋಪಿಗಳ ಆರೋಪ ಸಾಬೀತಾದರೆ ಮರಣದಂಡನೆ ಶಿಕ್ಷೆ ಸಿಗುವ ನಿರೀಕ್ಷೆಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X