ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ಜಿ ಹರಾಜು ಮೊತ್ತ 9,920 ಕೋಟಿಗೆ ಏರಿಕೆ

By Mahesh
|
Google Oneindia Kannada News

Minister A Raja
ನವದೆಹಲಿ,ಮೇ.2: ದೇಶದ 3ಜಿ ತರಂಗಾಂತರ ಸೇವೆಯ ಹರಾಜಿನಿಂದ ಸರ್ಕಾರ ಕನಿಷ್ಠ 40,054 ಕೋಟಿ ರೂಪಾಯಿಗಳನ್ನು ಗಳಿಸಲಿದೆ. ಹರಾಜಿನ 19 ನೇ ದಿನ ದೇಶಾದ್ಯಂತ 3ಜಿ ಸೇವೆಯ ಪರವಾನಗಿ ಹರಾಜು ಮೊತ್ತ 9,920 ಕೋಟಿ ರುಪಾಯಿಗಳಿಗೆ ತಲುಪಿದೆ.

ಇದು ನಿಗದಿತ ಬೆಲೆಯಾದ 35000ಕೋಟಿ ರೂಪಾಯಿಗಳಿಗಿಂತ ಶೇ.172 ರಷ್ಟು ಹೆಚ್ಚಳ ದಾಖಲಿಸಿದೆ. ಈ ಹಿಂದೆ 3ಜಿ ಹರಾಜಿನ ಮೂಲಕ ಸರ್ಕಾರ ಕನಿಷ್ಠ 35,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿ ಹೊಂದಿದ್ದು ಈಗಿನ ಬಿಡ್ ಅದನ್ನು ಮೀರಿದೆ. ಮುಂಬೈ ಹರಾಜಿನಲ್ಲಿ ಮುಂದಿದ್ದು 1,506 ಕೋಟಿ ರೂಪಾಯಿಗಳಿಗೆ ಬಿಡ್ ಸಲ್ಲಿಕೆಯಾಗಿದ್ದು ಇದು ದೇಶದಲ್ಲೆ ಅತ್ಯಧಿಕವಾಗಿದೆ.

ದೆಹಲಿಗೆ 1,459 ಕೋಟಿ ರೂಪಾಯಿಗಳಿಗೆ ಬಿಡ್ ಸಲ್ಲಿಕೆಯಾಗಿದೆ. ಹರಾಜಿಗಿಟ್ಟಿರುವ ದೇಶದ 22 ವೃತ್ತಗಳಲ್ಲಿ 17 ವೃತ್ತಗಳು 3 ಸ್ಲಾಟ್ ಗಳನ್ನು ಹೊಂದಿವೆ. ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆಗಳ ಹರಾಜು ಪ್ರಕ್ರಿಯೆ 3ಜಿ ಹರಾಜು ಮುಗಿದ ಎರಡು ದಿನಗಳ ನಂತರ ಪ್ರಾರಂಭಗೊಳ್ಳಲಿದೆ. ಹರಾಜಿನಿಂದ ಸರ್ಕಾರಕ್ಕೆ ಕನಿಷ್ಠ 50,000 ಕೋಟಿ ರೂಪಾಯಿ ಆದಾಯ ಆಗಲಿದೆ ಎಂದು ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಎ.ರಾಜ ತಿಳಿಸಿದ್ದಾರೆ.

ಮುಂಬೈ ಹಾಗೂ ದೆಹಲಿ ನಂತರ ಮಹಾರಾಷ್ಟ್ರ ಅಧಿಕ ಮೊತ್ತಕ್ಕೆ ಬಿಡ್ ಆಗಿದ್ದು ಬಿಡ್ ಮೊತ್ತ 1010.63 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ . ದೇಶದ ಪ್ರಮುಖ ಆರು ದೂರಸಂಪರ್ಕ ಸೇವೆ ಒದಗಿಸುತ್ತಿರುವ ಕಂಪೆನಿಗಳಾದ ಭಾರ್ತಿ ಏರ್ ಟೆಲ್ , ವೊಡಾಫೋನ್ ಎಸ್ಸಾರ್ , ರಿಲಯನ್ಸ್ ಕಮ್ಯುನಿಕೇಷನ್ಸ್ , ಟಾಟಾ ಟೆಲಿಸರ್ವಿಸಸ್ , ಏರ್ ಸೆಲ್ ಮತ್ತು ಐಡಿಯಾ ಸೆಲ್ಯುಲಾರ್ ಹರಾಜಿನಲ್ಲಿ ಭಾಗವಹಿಸಿವೆ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X