ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಫೆಟ್ ಭಾರತ ಭೇಟಿ,ಗರಿಗೆದರಿದ ನಿರೀಕ್ಷೆಗಳು

By Mahesh
|
Google Oneindia Kannada News

Warren Buffett
ನವದೆಹಲಿ, ಮೇ.2: ವಿಶ್ವದ ಪ್ರಮುಖ ಹೂಡಿಕೆದಾರ ವಾರೆನ್ ಬಫೆಟ್ ಮುಂದಿನ ಮಾರ್ಚ್ ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಬಂಡವಾಳ ಹೂಡುವ ಸಾಧ್ಯತೆಯೂ ಇದೆ ಎಂಬ ಸೂಕ್ಷ್ಮವಾಗಿ ಬಫೆಟ್ ಹೇಳಿದರು.

ತಮ್ಮ ಹೂಡಿಕೆ ಸಂಸ್ಥೆ ಬರ್ಕ್ ಶೈರ್ ನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತಿದ್ದ ಅವರು ಕಂಪೆನಿಯ ಇಸ್ಕರ್ ಲೋಹ ಘಟಕ ಭಾರತದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು. ಭಾರತದಲ್ಲಿ ವಿದೇಶಿ ಹೂಡಿಕೆಗೆ ಕೆಲ ನಿರ್ಬಂಧಗಳಿವೆ ಎಂದು ಹೇಳಿದ ಅವರು ಭಾರತದಲ್ಲಿ ವಿಮಾ ಮತ್ತು ಮರು ವಿಮೆ ಉದ್ಯಮಕ್ಕೆ ಉತ್ತಮ ಅವಕಾಶಗಳಿವೆ ಎಂದರು.

ಮುಂದಿನ 20 ವರ್ಷಗಳಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು ಭಾರತದ ಜನ ಮುಂದಿನ ಎರಡು ದಶಕದ ನಂತರ ಹೆಚ್ಚು ಉತ್ತಮ ಜೀವನ ಮಟ್ಟಕ್ಕೆ ಏರಲಿದ್ದಾರೆ ಎಂದರು. ಏಷ್ಯಾದಲ್ಲಿ ಕೊರಿಯಾದ ಉಕ್ಕು ತಯಾರಕ ಕಂಪೆನಿ ಪೋಸ್ಕೋ ಮತ್ತು ಚೀನಾದ ಕಾರು ಮತ್ತು ಬ್ಯಾಟರಿ ತಯಾರಿಕಾ ಕಂಪೆನಿ ಬಿವೈಡಿಯಲ್ಲಿ ಬರ್ಕ್‌ಶೈರ್ ಹೂಡಿಕೆ ಮಾಡಿದ್ದು ಎರಡೂ ಕಂಪೆನಿಗಳಿಂದ ಕ್ರಮವಾಗಿ 1.32 ಹಾಗೂ 1.75 ಬಿಲಿಯನ್ ಡಾಲರ್ ಗಳಷ್ಟು ಲಾಭ ಕಳೆದ ವರ್ಷದ ಗಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X