ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ನಾಲ್ಕು ಕಡೆ ಅನಿಲ ವಿದ್ಯುತ್ ಘಟಕ

By Mrutyunjaya Kalmat
|
Google Oneindia Kannada News

VS Acharya
ಬೆಂಗಳೂರು, ಏ. 30 : ವಿದ್ಯುತ್ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವ ರಾಜ್ಯ ಸರಕಾರ, ಹುಕ್ಕೇರಿ, ಮುಂಡರಗಿ ಹಾಗೂ ಹರಪನಹಳ್ಳಿಯಲ್ಲಿ ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಅನುಮತಿ ನೀಡಲು ರ್ಮಾನಿಸಲಾಗಿದೆ.

ಸಂಪುಟ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ವಿ ಎಸ್ ಆಚಾರ್ಯ, ಆ ಸಂಬಂಧ ಡಿಸೆಂಬರ್ ವೇಳೆಗೆ ಯೋಜನಾ ವರದಿ ಸಿದ್ಧವಾಗಲಿದೆ ಎಂದರು. ವಿದ್ಯುತ್ ಉತ್ಪಾದಿಸಲು ಮೂರೂ ಘಟಕಗಳಿಗೆ ವಾರ್ಷಿಕ 3.2 ದಶಲಕ್ಷ ಟನ್ ಅನಿಲ ಬೇಕಾಗುತ್ತದೆ. ಇದಕ್ಕಾಗಿ ಭಾರತೀಯ ಅನಿಲ ಪ್ರಾಧಿಕಾರ 2012 ರೊಳಗೆ ಪೈಪ್ ಲೈನ್ ಅಳವಡಿಸಲಿದೆ. ಅಷ್ಟರೊಳಗೆ ಅನಿಲ ಹಂಚಿಕೆ ಪ್ರಮಾಣ ನಿಗದಿಯಾಗುತ್ತದೆ.

ಘಟಕ ಸ್ಥಾಪನೆಗೆ ತಲಾ 200-300 ಎಕರೆ ಜಾಗ ಅಗತ್ಯವಿದ್ದು, ಕೆಐಎಡಿಬಿ ಇದರ ವ್ಯವಸ್ಥೆ ಮಾಡಲಿದೆ. ಅಲ್ಲದೇ ಜಲಾಶಯಗಳಿಂದ ನೀರಿನ ಸೌಲಭ್ಯ ಪಡೆಯಲು ಉದ್ದೇಶಿಸಲಾಗಿದೆ. ಇದಲ್ಲದೆ ಬೆಂಗಳೂರಿನ ಬಿಡದಿ ಬಳಿ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಘಟಕ ಸ್ಥಾಪಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಆಚಾರ್ಯ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X