ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಪ ಪ್ರಮಾಣ ಲಾಭಕ್ಕೆ ಎಚ್ ಸಿಎಲ್ ತೃಪ್ತಿ

By Mahesh
|
Google Oneindia Kannada News

HCL Infosystems Q3 net up 3 pc
ಮುಂಬೈ, ಏ.30: ಮಾಹಿತಿ ತಂತ್ರಜ್ಞಾನ ಕಂಪೆನಿ ಎಚ್ ಸಿಎಲ್ ಟೆಕ್ನಾಲಜೀಸ್ ಕಳೆದ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ.3.44 ರಷ್ಟು ಲಾಭವನ್ನು ಹೆಚ್ಚಿಸಿಕೊಂಡಿದ್ದು ನಿವ್ವಳ ಲಾಭ 60 ಕೋಟಿ ರೂಪಾಯಿಗಳಿಗೇರಿದೆ. ಮುಂದಿನ ಮೂರು ವರ್ಷದ ಅವಧಿಗೆ ಮೆಲ್ಬೋರ್ನ್ ಮೂಲದ ಕಂಪನಿಗೆ ಏಕೀಕೃತ ವೆಬ್ ಆಧಾರಿತ ಸೇವೆ(IWS) ಯನ್ನು ಒದಗಿಸುವ ಒಪ್ಪಂದವನ್ನು ಹೊಂದಿದ್ದು, ಎಚ್ ಸಿಎಲ್ ಗೆ ವರವಾಗಿ ಪರಿಣಮಿಸಿದೆ.

ಈ ಕುರಿತು ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿರುವ ಕಂಪೆನಿ ನಿವ್ವಳ ಮಾರಾಟ 2,814.50 ಕೋಟಿ ರೂಪಾಯಿಗಳಿಗೆ ಕುಸಿದಿದ್ದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 2,990.63 ಕೋಟಿ ರೂಪಾಯಿಗಳ ಮಾರಾಟ ದಾಖಲಿಸಿತ್ತು. 2009-2010ನೇ ಸಾಲಿಗೆ ಕಂಪೆನಿ 2 ರು. ಮುಖಬೆಲೆಯ ಷೇರು ಒಂದಕ್ಕೆ ರು.2 ಡಿವಿಡೆಂಡ್ ಘೋಷಿಸಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಕಂಪೆನಿ ಒಟ್ಟು 175 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು ಹಿಂದಿನ ವರ್ಷಕ್ಕಿಂತ ಶೇ 2.44 ರಷ್ಟು ಹೆಚ್ಚು ಲಾಭ ಗಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X