ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಲಿಪ್: ಕೋರ್ಟ್ ಹತ್ತದಿರಲು ಸೆಬಿ ಯೋಚನೆ

By Mahesh
|
Google Oneindia Kannada News

Sebi drops legal option on Ulips
ಮುಂಬೈ, ಏ.29: ಮಾರುಕಟ್ಟೆ ಆಧಾರಿತ ವಿಮಾ ಪಾಲಿಸಿಗಳ ಕುರಿತು ವಿಮಾ ನಿಯಂತ್ರಣ ಪ್ರಾಧಿಕಾರದೊಂದಿಗೆ ಅಧಿಕಾರದ ಕುರಿತು ಇರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸುವ ಕ್ರಮವನ್ನು ಕೈಬಿಡಲು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಮುಂದಾಗಿದೆ.

ವಿಮೆ ನಿಯಂತ್ರಣ ಪ್ರಾಧಿಕಾರ ಐಆರ್‌ಡಿಏ ತನಗೆ ಬರೆದಿರುವ ಪತ್ರಕ್ಕೆ ಎರಡು ಸಾಲಿನ ಉತ್ತರ ನೀಡಿರುವ ಸೆಬಿ ಹೆಚ್ಚಿನದೇನನ್ನೂ ಹೇಳುವದಿಲ್ಲ ಎಂದು ತಿಳಿಸಿದೆ. ಯುಲಿಪ್ ಗಳ ಮೇಲೆ ಎರಡೂ ಸಂಸ್ಥೆಗಳಿಗೆ ಇರುವ ಅಧಿಕಾರ ವ್ಯಾಪ್ತಿಯ ಕುರಿತು ವಿವಾದ ಬಗೆಹರಿಸಿಕೊಳ್ಳಲು ಸರ್ಕಾರ ನ್ಯಾಯಾಲಯಕ್ಕೆ ತೆರಳುವಂತೆ ಸೂಚಿಸಿತ್ತು.

ಯುಲಿಪ್ ಗಳು ವಿಮಾ ಉತ್ಪನ್ನಗಳಾಗಿರುವುದರಿಂದ ಅವುಗಳ ಮೇಲಿನ ಅಧಿಕಾರ ತನಗೆ ಸೇರಿದ್ದು ಎಂದು ಐಆರ್ ಎ ಹೇಳಿದರೆ, ಅವು ಮಾರುಕಟ್ಟೆಯಲ್ಲಿ ಭಾಗವಹಿಸುತ್ತಿರುವದರಿಂದ ತನಗೆ ಸಂಪೂರ್ಣ ಅಧಿಕಾರ ಇದೆ ಎಂದು ಸೆಬಿ ಹೇಳಿದ್ದು, 14 ವಿಮಾ ಕಂಪೆನಿಗಳ ಹೊಸ ಪಾಲಿಸಿ ಬಿಡುಗಡೆಗೊಳಿಸುವದಕ್ಕೆ ನಿರ್ಬಂಧ ಹೇರಿತ್ತು. ಆದರೆ ಈ ಪಟ್ಟಿಯಲ್ಲಿ ಸರಕಾರಿ ಸ್ವಾಮ್ಯದ ಎಲ್‌ಐಸಿ ಹೆಸರನ್ನು ಉಲ್ಲೇಖಿಸಿರಲಿಲ್ಲ.

ಕಳೆದ ಏಪ್ರಿಲ್ 12 ರಂದು ಎರಡೂ ಸಂಸೆಗಳು ನ್ಯಾಯಾಲಯಕ್ಕೆ ತೆರಳಲು ತೀರ್ಮಾನಿಸಿದ್ದವು. ಆದರೆ ಸೆಬಿ ಸದ್ಯಕ್ಷ ಸಿಬಿ ಭಾವೆ ಬರೆದಿರುವ ಪತ್ರದಿಂದ ಸೆಬಿ ನ್ಯಾಯಾಲಯಕ್ಕೆ ತೆರಳಲು ನಿರಾಕರಿಸಿದೆ. ಸೆಬಿಯ ನಿಷೇಧ ಕುರಿತು ಈಗಾಗಲೇ ಎರಡು ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಗಿದೆ. ಇದರಿಂದ ವಿವಾದ ಬಗೆಹರಿಸಿಕೊಳ್ಳಲು ಐಆರ್ ಡಿಎ ಪುನಃ ಸರ್ಕಾರದ ಮೊರೆ ಹೋಗಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X