ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಗೆ ಮುಸ್ಲಿಮರ ನೋವಿನ ಅರಿವಿಲ್ಲ

By Mahesh
|
Google Oneindia Kannada News

Lalu, Mulayam accuse government of being anti-Muslim
ನವದೆಹಲಿ, ಏ.29: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮುಸ್ಲಿಮರ ಬಗ್ಗೆ ಕಾಳಜಿಯಿಲ್ಲ. ಅವರ ನೋವಿನ ಅರಿವಿಲ್ಲ ಎಂದು ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಎಂದು ಲೋಕಸಭೆಯಲ್ಲಿ ಟೀಕಾ ಪ್ರಹಾರ ನಡೆಸಿದರು. ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಲಾಲೂಗೆ ಸಾಥ್ ನೀಡಿದ ರು ಇಬ್ಬರು ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.

ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಲಾಲೂ ಮುಸ್ಲಿಮರಿಗೆ ಸರಕಾರಿ ಉದ್ಯೋಗದಲ್ಲಿ ಗರಿಷ್ಠ ಆದ್ಯತೆ ನೀಡಬೇಕು ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತ ಸಾಚಾರ್ ಮತ್ತು ರಂಗನಾಥ್ ಮಿಶ್ರಾ ಆಯೋಗಗಳ ವರದಿಗಳ ಜಾರಿಗೆ ಸರಕಾರ ಬದ್ಧವಾಗಿದೆಯೇ? ಯುಪಿಎ ಸರಕಾರವು ಮಹಿಳಾ ಮೀಸಲಾತಿಗೆ ಮುಂದಾಗಿರುವಂತೆ, ಮುಸ್ಲಿಮರಿಗೂ ಮೀಸಲಾತಿ ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಸರಕಾರ ಸಿದ್ಧವೇ ಎಂದು ಪ್ರಶ್ನಿಸಿದರು.

ಇದಕ್ಕೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಉತ್ತರಿಸಲು ನಿರಾಕರಿಸಿದಾಗ, ಕೋಪಗೊಂಡ ಲಾಲೂ, ಯುಪಿಎ ಸರ್ಕಾರ ಮುಸ್ಲಿಂ ವಿರೋಧಿ ಎಂದು ಜರೆದರು. ಈ ಸಂಬಂಧ ಒಂದು ಮನವಿಯನ್ನು ನೀಡಿದಲ್ಲಿ, ಅದನ್ನು ಸದನದಲ್ಲಿ ಚರ್ಚೆ ನಡೆಸಬಹುದಾಗಿದೆ ಎಂದು ಸ್ಪೀಕರ್ ಮೀರಾ ಕುಮಾರ್ ಹೇಳಿದರೂ, ಕೇಳದ ಲಾಲೂ ಹಾಗೂ ಮುಲಾಯಂ ಸದನದಿಂದ ಹೊರನಡೆದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X