ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇ 25ಕ್ಕೆ ಸಿಇಟಿ ಫಲಿತಾಂಶ : ಲಿಂಬಾವಳಿ
ಬೆಂಗಳೂರು, ಏ. 29 : ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಮೇ 25 ರಂದು ಪ್ರಕಟವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ನಗರದಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿದ್ದ ಬಾಲ್ಡ್ ವಿನ್ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮುಂಚೆ ಫಲಿತಾಂಶವನ್ನು ಮೇ 20ರಂದು ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ, ಸಿಬಿಎಸ್ಇ, ಸಿಐಎಸ್ ಸಿಇ ಫಲಿತಾಂಶ ತಡವಾಗುವ ಸಾಧ್ಯತೆ ಇರುವುದರಿಂದ ಸಿಇಟಿ ಫಲಿತಾಂಶವನ್ನು ಮೇ 25 ರಂದು ಪ್ರಕಟಿಸಲಾಗುವುದು ಎಂದರು.
ಈಗಾಗಲೇ ನಿಗದಿಯಾಗಿರುವಂತೆ ಜೂನ್ 2 ರಂದು ಕೌನ್ಸೆಲಿಂಗ್ ಆರಂಭವಾಗಲಿದೆ. 2 ರಿಂದ 8ರ ವರೆಗೆ ಅಂಗವಿಕಲರು, ಎನ್ ಸಿಸಿ ಕ್ರೀಡಾ ಕೋಟಾದ ವಿದ್ಯಾರ್ಥಿಗಳಿಗೆ ಪ್ರವೇಶ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ. ಜೂನ್ 10 ರಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ, 15 ರಿಂದ ಯುನಾನಿ, ಆಯುರ್ವೇದ, ಹೋಮಿಯೋಪತಿ, ಯೋದ ಕೋರ್ಸ್ ಗಳಿಗೆ ಕೌನ್ಸೆಲಿಂಗ್ ನಡೆಯಲಿದೆ ಎಂದು ಲಿಂಬಾವಳಿ ವಿವರಿಸಿದರು.