ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮನಾಥ್, ಕೆಎಂಎಫ್ ನೂತನ ಎಂಡಿ

By Rajendra
|
Google Oneindia Kannada News

Bamul - Bangalore Dairy
ಬೆಂಗಳೂರು, ಏ.29: ಕರ್ನಾಟಕ ಹಾಲು ಮಹಾ ಮಂಡಲದ(ಕೆಎಂಎಫ್) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಎ ಎಸ್ ಪ್ರೇಮನಾಥ್(ಪ್ರಭಾರಿ) ಬುಧವಾರ ಸಂಜೆ ನೇಮಕಗೊಂಡಿದ್ದಾರೆ. ಕಳೆದ ಮುವ್ವತ್ತು ವರ್ಷಗಳಿಂದ ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರೇಮನಾಥ್ ಸೇವೆ ಸಲ್ಲಿಸಿದ್ದಾರೆ.

ಇದುವರೆಗೂ ಪ್ರೇಮನಾಥ್ ಮಾರುಕಟ್ಟೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಎಂಎಫ್ ನ ಅಧ್ಯಕ್ಷ ಜಿ ಸೋಮಶೇಖರರೆಡ್ಡಿ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಅವರು ಬುಧವಾರ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.

ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ.ವೆಂಕಟರಾಮು ಅವರನ್ನು ಬೆಂಗಳೂರು ಡೇರಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಮದರ್ ಡೇರಿ ನಿರ್ದೇಶಕರಾಗಿದ್ದ ಕಾಕಡೆ ಅವರನ್ನು ಕೆಎಂಎಫ್ ಮಾರುಕಟ್ಟೆ ವಿಭಾಗದ ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X