ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಇಲಾಖೆಯ ಅಧಿಕಾರಿ ಸಿಬಿಐ ಬಲೆಗೆ

By Mahesh
|
Google Oneindia Kannada News

Senior Home Ministry official held for graft
ನವದೆಹಲಿ, ಏ.28: ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಓ ರವಿ ಎಂಬುವರು ಇಂದು ಉದ್ಯಮಿಯೊಬ್ಬರಿಂದ 50 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯಾಗಿ ಓ ರವಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ಡಿಯುಗೆ ಸೇರಿದ ಅಲೋಕ್ ಖಿಮಾನಿ ಎಂಬ ಉದ್ಯಮಿಯಿಂದ 50 ಲಕ್ಷ ರೂಪಾಯಿ ಲಂಚ ಪಡೆದ ಆರೋಪವನ್ನು ರವಿ ಮೇಲೆ ಸಿಬಿಐ ಹೊರೆಸಿದೆ. ರವಿಯ ನವದೆಹಲಿಯಲ್ಲಿ ನಿವಾಸದ ಮೇಲೂ ಸಿಬಿಐ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ.

52ರ ಹರೆಯದ ಈ ವ್ಯಕ್ತಿ 1983ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಗೃಹ ಸಚಿವಾಲಯದ ಪ್ರಮುಖ ಹುದ್ದೆಯಲ್ಲಿದ್ದ. ಈತನನ್ನು ಇದೀಗ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯನ್ನಾಗಿ ರವಿಯನ್ನು ಕೇಂದ್ರ ಸರಕಾರವು ನೇಮಿಸಿತ್ತು. ಗೃಹ ಇಲಾಖೆಯ ಜೊತೆಗೆ ವಿಪತ್ತು ನಿರ್ವಹಣೆ ಇಲಾಖೆಯ ಜಂಟಿ ಕಾರ್ಯದರ್ಶಿಗಳ ಕಚೇರಿಯಲ್ಲೂ ರವಿ ದುಡಿಯುತ್ತಿದ್ದಾರೆ. 2009ರಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಪರಿಹಾರ ಕಾರ್ಯಗಳಿಗಾಗಿ ಸಮೀಕ್ಷೆ ನಡೆಸಿದ ಕೇಂದ್ರ ತಂಡದ ನೇತೃತ್ವವನ್ನು ರವಿ ವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X