ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಸಾವಿರ ಐಟಿ ನೌಕರರ ನೇಮಕ

By Mahesh
|
Google Oneindia Kannada News

TCS, Infy, Wipro hire 20,000 in Q4
ಬೆಂಗಳೂರು,ಏ.27: ದೇಶದ ಪ್ರಮುಖ ಮೂರು ಮಾಹಿತಿ ತಂತ್ರಜ್ಞಾನ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ಮತ್ತು ವಿಪ್ರೋ ಕಳೆದ ಜನವರಿ- ಮಾರ್ಚ್ 2010 ರ ತ್ರೈಮಾಸಿಕದಲ್ಲಿ 20,000 ನೌಕರರನ್ನು ನೇಮಕ ಮಾಡಿಕೊಂಡಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯವಹಾರ ಹೆಚ್ಚಳಗೊಳ್ಳುತ್ತಿರುವದೇ ಇದಕ್ಕೆ ಕಾರಣ.

ಉದ್ಯಮ ತಜ್ಞರ ಪ್ರಕಾರ ಮಾಹಿತಿ ತಂತ್ರಜ್ಞಾನ (IT)ಮತ್ತು ತಂತ್ರಜ್ಞಾನ ಆಧಾರಿತ ಸೇವೆ(ITES)ಯಲ್ಲಿ ಈ ವರ್ಷ ಇನ್ನೂ ಹೆಚ್ಚಿನ ನೇಮಕಗಳು ನಡೆಯಲಿವೆ. ಕಳೆದ ತ್ರೈಮಾಸಿಕದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ 9,313 ನೌಕರರನ್ನು ನೇಮಕ ಮಾಡಿಕೊಂಡಿದ್ದು, ಈ ಅವಧಿಯಲ್ಲಿ 3,914 ನೌಕರರು ಕೆಲಸ ಬಿಟ್ಟಿದ್ದಾರೆ. ಈ ನೇಮಕದಿಂದಾಗಿ ಇನ್ಫೋಸಿಸ್ ನ ಒಟ್ಟು ನೌಕರರ ಸಂಖ್ಯೆ 1,13,796 ಕ್ಕೇರಿದೆ (ಮಾರ್ಚ್ ಅಂತ್ಯದ ಗಣತಿಯಂತೆ).

ದೇಶದ ಅತೀ ದೊಡ್ಡ ಸಾಫ್ಟ್ ವೇರ್ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಈ ಅವಧಿಯಲ್ಲಿ 10,775 ನೌಕರರನ್ನು ನೇಮಕ ಮಾಡಿಕೊಂಡಿದ್ದು, ಇದರಿಂದ ಕಂಪೆನಿಯ ಒಟ್ಟು ನೌಕರರ ಸಂಖ್ಯೆ 1,60,429 ಕ್ಕೇರಿದೆ. ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಿಂದ ಕಂಪೆನಿಗಳು ಹೆಚ್ಚು ನೌಕರರನ್ನು ನೇಮಕ ಮಾಡಿಕೊಳ್ಳುತ್ತಿವೆ.

ಟಿಸಿಎಸ್ ಕಳೆದ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೇವಲ 320 ನೌಕರರನ್ನು ನೇಮಕ ಮಾಡಿಕೊಂಡಿದ್ದರೆ, ಮೂರನೇ ತ್ರೈಮಾಸಿಕದಲ್ಲಿ 7,692 ನೌಕರರನ್ನು ನೇಮಕ ಮಾಡಿಕೊಂಡಿತ್ತು .ದೇಶದ ಮೂರನೇ ಅತೀ ದೊಡ್ಡ ಸಾಫ್ಟ್ ವೇರ್ ಕಂಪೆನಿ ವಿಪ್ರೋ ಕಳೆದ ತ್ರೈಮಾಸಿಕದಲ್ಲಿ 5,325 ನೌಕರರನ್ನು ನೇಮಕ ಮಾಡಿಕೊಂಡಿದ್ದು ಒಟ್ಟು ನೌಕರರ ಸಂಖ್ಯೆ 1,08,071 ಕ್ಕೇರಿದೆ. ಉದ್ಯಮ ತಜ್ಞರ ಪ್ರಕಾರ ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳ ಕಂಪೆನಿಗಳು ಈ ಹಣಕಾಸು ವರ್ಷದಲ್ಲಿ 1,50,000 ನೇಮಕ ಮಾಡಿಕೊಳ್ಳಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X