ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಕೇಂದ್ರೀಯ ವಿವಿಗಳಿಗೆ ಜಂಟಿ ಪ್ರವೇಶ ಪರೀಕ್ಷೆ

By Rajendra
|
Google Oneindia Kannada News

Gulbarga University
ನವದೆಹಲಿ, ಏ.27: ಗುಲ್ಬರ್ಗ ವಿಶ್ವವಿದ್ಯಾಲಯ ಸೇರಿದಂತೆ ಹೊಸದಾಗಿ ಸ್ಥಾಪಿಸಲಾಗಿರುವ ಏಳು ಕೇಂದ್ರೀಯ ವಿವಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಂಟಿ ಪ್ರವೇಶ ಪರೀಕ್ಷೆ (ಸಿಇಇ) ನಡೆಯಲಿದೆ. ಈ ರೀತಿಯ ಜಂಟಿ ಪ್ರವೇಶ ಪರೀಕ್ಷೆಗಳನ್ನು ಸದ್ಯಕ್ಕೆ ಐಐಟಿ ಹಾಗೂ ಐಐಎಂ ಗಳಿಗೆ ಮಾತ್ರ ನಡೆಸಲಾಗುತ್ತಿದೆ.

ಒಟ್ಟು 25 ಕೋರ್ಸ್ ಗಳಿಗೆ ಈ ಪರೀಕ್ಷೆ ಜೂ.19, 20 ರಂದು ನಡೆಯಲಿದೆ. ಪ್ರವೇಶ ಪರೀಕ್ಷೆಗಾಗಿ ಗುಲ್ಬರ್ಗ ಸೇರಿದಂತೆ ರಾಜ್ಯದಲ್ಲಿ ಮೂರು ಹಾಗೂ ದೇಶದಾದ್ಯಂತ 30 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ವಿವಿಯು ತನ್ನ ವ್ಯಾಪ್ತಿಯಲ್ಲಿ ಪರೀಕ್ಷೆಯನ್ನು ಆಯೋಜಿಸಲಿದೆ.

ಈ ಏಳೂ ವಿವಿಗಳಲ್ಲಿ ಪ್ರವೇಶ ಪಡೆಯಲು ಜಂಟಿ ಪ್ರವೇಶ ಪರೀಕ್ಷೆಗೆ ದೇಶದ ಯಾವುದೇ ಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಮಿಳುನಾಡು ಕೇಂದ್ರೀಯ ವಿವಿಯ ಉಪಕುಲಪತಿ ಪ್ರೊ.ಬಿ ಪಿ ಸಂಜಯ್ ತಿಳಿಸಿದ್ದಾರೆ.

ಕಳೆದ ವರ್ಷ ಹೊಸದಾಗಿ ಸ್ಥಾಪನೆಯಾದ ಒಟ್ಟು 16 ಕೇಂದ್ರೀಯ ವಿವಿಗಳಲ್ಲಿ ಈ ಏಳು ವಿವಿಗಳು ಮಾತ್ರ ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿವೆ.ಉಳಿದ ಒಂಭತ್ತು ವಿವಿಗಳು ಜಂಟಿ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸಂಜಯ್ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X