ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ಜಿ ಹರಾಜು :ದೆಹಲಿಯನ್ನು ಹಿಂದಿಕ್ಕಿದ ಮುಂಬೈ

By Mahesh
|
Google Oneindia Kannada News

3G Spectrum Auction...Mumbai overtakes Delhi
ನವದೆಹಲಿ,ಏ.27: ದೇಶದ 3ಜಿ ತರಂಗಾಂತರ ಸೇವೆಯ ಹರಾಜಿನಿಂದ ಸರ್ಕಾರ ಕನಿಷ್ಠ 33,500 ಕೋಟಿ ರೂಪಾಯಿಗಳನ್ನು ಗಳಿಸಲಿದೆ. ಹರಾಜು ಪ್ರಾರಂಬಗೊಂಡ 14 ನೇ ದಿನಕ್ಕೆ ದೇಶಾದ್ಯಂತ 3ಜಿ ಸೇವೆಯ ಪರವಾನಗಿ ಹರಾಜು ಮೊತ್ತ 8282.48 ಕೋಟಿ ರೂಪಾಯಿಗಳನ್ನು ತಲುಪಿದ್ದು ಕನಿಷ್ಟ ಬೆಲೆಯಾದ 3500 ಕೋಟಿ ರೂಪಾಯಿಗಳಿಗಿಂತ ಶೇ.139 ರಷ್ಟು ಅಧಿಕ ಬೆಲೆಗೆ ಬಿಡ್ ಆಗಿದೆ.

ಮುಂಬೈ ವೃತ್ತದ ಗರಿಷ್ಠ ಬಿಡ್ 1252.32 ಕೋಟಿ ರೂಪಾಯಿ ದಾಖಲಾಗಿದ್ದು, ಇದಕ್ಕೆ ಕನಿಷ್ಠ ಬೆಲೆ ರು.320 ಕೋಟಿಯನ್ನು ನಿಗದಿಪಡಿಸಲಾಗಿತ್ತು ದೆಹಲಿಯ ಗರಿಷ್ಠ ಬಿಡ್ 1209.66 ಕೋಟಿ ರೂಪಾಯಿ ದಾಖಲಾಗಿದೆ. ಮುಂಬೈ ಹಾಗೂ ದೆಹಲಿ ವೃತ್ತದಲ್ಲಿ ಇನ್ನೂ ಮೂರು ಸ್ಲಾಟ್ ಗಳು ಹರಾಜಿಗೆ ಬಾಕಿ ಇವೆ.

ಮುಂಬೈ ವೃತ್ತದಲ್ಲಿ ಎರಡು ಹಾಗೂ ದೆಹಲಿ ವೃತ್ತದಲ್ಲಿ ಮೂರು ಹರಾಜುದಾರರಿದ್ದಾರೆ . ಸರ್ಕಾರ3ಜಿ ಹಾಗೂ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆಗಳ ಹರಾಜಿನಿಂದ ಕನಿಷ್ಟ ರೂ 35,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿ ಹೊಂದಿದೆ. ಇದರಲ್ಲಿ 3ಜಿ ಸೇವೆಯಿಂದಲೇ ರೂ.30,000 ಕೋಟಿ ರೂಪಾಯಿಗಳ ಆದಾಯ ನಿರೀಕ್ಷೆ ಹಾಕಿಕೊಲ್ಳಲಾಗಿತ್ತು.

3ಜಿ ಹರಾಜು ಮುಕ್ತಾಯಗೊಂಡ 2 ದಿನಗಳ ನಂತರ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆ ಹರಾಜು ಆರಂಭಗೊಳ್ಳಲಿದೆ. 3 ಜಿ ಹಾಗೂ ಬ್ರಡ್ ಬ್ಯಾಂಡ್ ಸೇವೆಗಳ ಹರಾಜಿನಿಂದ ಸರ್ಕಾರ ಕನಿಷ್ಟ ರೂ 50,000 ಕೋಟಿ ರೂಪಾಯಿಗಳನ್ನು ಗಳಿಸಲಿದೆ ಎಂದು ದೂರಸಂಪರ್ಕ ಸಚಿವ ಏ ರಾಜ ಅವರು ಲೋಕಸಬೆಯಲ್ಲಿ ಹೇಳಿದ್ದರು.

ಏಪ್ರಿಲ್ 9 ರಿಂದ ಆರಂಭಗೊಂಡ ಹರಾಜು ಸೋಮವಾರದಿಂದ ಶನಿವಾರದವರೆಗೆ ನಡೆಯುತ್ತಿದ್ದು ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು ಹರಾಜು ಇರುವದಿಲ್ಲ. 14 ನೇ ದಿನಕ್ಕೆ 82 ಸುತ್ತುಗಳ ಹರಾಜು ಪೂರ್ಣಗೊಂಡಿದ್ದು ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ. ದೇಶದ 22 ವೃತ್ತಗಳಲ್ಲಿ ಏರ್ ಟೆಲ್ , ವೊಡಾಫೋನ್ ಎಸ್ಸಾರ್, ಟಾಟಾ ಟೆಲಿಸರ್ವೀಸಸ್, ರಿಲಯನ್ಸ್ ಕಮ್ಯುನಿಕೇಷನ್ಸ್, ಈಡಿಯಾ ಸೆಲ್ಯುಲಾರ್ ಮತ್ತು ಏರ್ ಸೆಲ್ ಭಾಗವಹಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X