ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 3ಜಿಗೆ ಅವಕಾಶ, ಸವಾಲುಗಳೇನು?

By Mahesh
|
Google Oneindia Kannada News

3G in India: Opportunities and Challenges
ಬೆಂಗಳೂರು, ಏ.27:ಅನಲಾಗ್ ಸೆಲ್ಯುಲಾರ್ ಫೋನ್ ಮೊದಲ ಪೀಳಿಗೆಯಾದರೆ, ಡಿಜಿಟಲ್ ಮೊಬೈಲ್ ಎರಡನೇ ಪೀಳಿಗೆಯ ಬೆಳವಣಿಗೆ. ಈ ಎರಡು ಪೀಳಿಗೆಯಲ್ಲಿ ಬಂದ ಉತ್ಪನ್ನಗಳಿಗಿಂತ ಉತ್ಕೃಷ್ಟವಾದ ಹಾಗೂ ವೇಗಪ್ರಧಾನವಾದದ್ದು ಮೂರನೇ ಪೀಳಿಗೆ 3ಜಿ ಮೊಬೈಲ್ ಗಳು. ಭಾರತದಲ್ಲಿ 3ಜಿಯನ್ನು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ ಎನ್ ಎಲ್) ಪರಿಚಯಿಸುತ್ತಿದೆ. ಇದರ ಜೊತೆಗೆ ಇನ್ನು ಮೂರು ಮೊಬೈಲ್ ಉದ್ಯಮಿಗಳನ್ನು ಹೊಂದಲು ಅವಕಾಶವಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾರ್ತಿ ಏರ್ ಟೆಲ್, ವೊಡಾಫೋನ್, ಆರ್‌ಕಾಮ್, ಟಾಟಾ ಮುಂಚೂಣಿಯಲ್ಲಿವೆ.

International Mobile Telecommunications-2000 (IMT-2000) 3ಜಿ ಅಥವಾ 3 ನೇ ಪೀಳಿಗೆ ಎಂದು ಜನಪ್ರಿಯ. ಮೊಬೈಲ್ ದೂರಸಂವಹನಕ್ಕಾಗಿ ಅಂತಾರಾಷ್ಟ್ರೀಯ ಸಂವಹನ ಒಕ್ಕೂಟ ಗೊತ್ತು ಮಾಡಿರುವ ಮಾನದಂಡಗಳ ಕುಟುಂಬವನ್ನು 3ಜಿ ಹೊಂದಿದೆ. 3ಜಿ ಸೇವೆಗಳಲ್ಲಿ ಧ್ವನಿ ಆಧಾರಿತ ಸೇವೆ, ವಿಡಿಯೋ ಕಾಲ್, ನಿಸ್ತಂತು ಮಾಹಿತಿ ರವಾನೆ ಜೊತೆಗೆ ಉನ್ನತ ವೇಗದಲ್ಲಿ ದತ್ತಾಂಶ ರವಾನೆ ( ಕನಿಷ್ಠ 200 ಕಿಬಿಟ್ಸ್/ಸೆ ನಿಂದ 14 ಮೆಬಿಟ್/ಸೆ ಡೌನ್ ಲಿಂಕ್ ಮತ್ತು 5.8 ಮೆಬಿಟ್/ಸೆ ಅಪ್ ಲಿಂಕ್ ಸಾಧ್ಯ. ಉಳಿದಂತೆ ಮೊಬೈಲ್ ಟಿವಿ, ವಿಡಿಯೋ ಆನ್ ಡಿಮ್ಯಾಂಡ್, ವಿಡಿಯೋ ಕಾನ್ಫರೆನ್ಸ್, ಟೆಲಿ ಮೆಡಿಸಿನ್ ಹಾಗೂ ಸ್ಥಳೀಯ ಸೇವೆಗಳು(ವಾತಾವರಣ, ಟ್ರಾಫಿಕ್ ಅಪ್ ಡೇಟ್. . ಇತ್ಯಾದಿ).

ಈಗ ಭಾರತಕ್ಕೆ ಕಾಲಿಟ್ಟಿರುವ 3ಜಿ ತಂತ್ರಜ್ಞಾನಕ್ಕೆ ನಾವು ಸಜ್ಜಾಗಿದ್ದೇವೆಯೇ? ಇದರ ಸಾಧಕ ಬಾಧಕಗಳೇನು? ಎಂಬುದರ ಬಗ್ಗೆ ಇತ್ತೀಚಿಗೆ ನಡೆದ ಚರ್ಚೆಯ ಸಂಕ್ಷಿಪ್ತ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X