ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾಭವನದಲ್ಲಿ ನಿರೂಪಣೆ ಕಲೆ ಕೋರ್ಸ್

By Shami
|
Google Oneindia Kannada News

A TV anchor
ಬೆಂಗಳೂರು, ಏ. 26 : ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿ ನಡೆಸುವ ಧ್ವನಿ ಸಂಸ್ಕಾರ ಮತ್ತು ನಿರೂಪಣೆ ಕಲೆ (Voice Culture & Anchoring) ಕೋರ್ಸ್ ಮೇ 3ರಿಂದ ಪ್ರಾರಂಭವಾಗುತ್ತದೆ.

ಮೂರು ವಾರಗಳ ಅವಧಿಯ ಈ ಕೋರ್ಸ್‌ನಲ್ಲಿ ಧ್ವನಿಯನ್ನು ಗುರುತಿಸಿಕೊಳ್ಳುವುದು, ಪೋಷಿಸಿಕೊಳ್ಳುವುದು, ಧ್ವನಿ ಉಂಟುಮಾಡುವುದು, ರೂಢಿಸಿಕೊಳ್ಳುವುದು, ಬಳಸುವುದು, ಧ್ವನಿ ಸಾಧನೆ, ಅಭಿವ್ಯಕ್ತಿ, ಶ್ರವಣ, ಉಸಿರಾಟದ ನಿಯಂತ್ರಣ, ಹೊರಳು ನುಡಿಗಳ ಅಭ್ಯಾಸ, ಆಂಗಿಕ ಅಭಿವ್ಯಕ್ತಿ, ದೈಹಿಕ ಮತ್ತು ಮಾನಸಿಕ ದಾರ್ಢ್ಯತೆ, ಪದಗಳ ಅರ್ಥದ ಮೇಲೆ ಗಮನ, ಧ್ವನಿ ಸೂಕ್ಷ್ಮಗಳು, ಅಲಂಕಾರ, ಪ್ರಸಾಧನ, ಮುಖ ಮತ್ತು ಕೇಶ ವಿನ್ಯಾಸ, ವೇಷ ಭೂಷಣ ಮೊದಲಾದವುಗಳನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುವುದು.

ಕನಿಷ್ಠ ವಿದ್ಯಾರ್ಹತೆ ಪದವಿ. ಕೋರ್ಸ್ ವೇಳೆ : ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿವಸ ಬೆಳಗ್ಗೆ 8ರಿಂದ ಮಧ್ಯಾಹ್ನ 1. ವಯೋಮಿತಿ 30 ವರ್ಷಗಳು. ಆಸಕ್ತರು ಕೂಡಲೇ ಮಾಧ್ಯಮ ಭಾರತಿಯನ್ನು ದೂರವಾಣಿ ಸಂಖ್ಯೆ 99865 06475 ಅಥವಾ [email protected] ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X