ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕನಿಗೆ ಬ್ರ್ಯಾಂಡಿ ಕುಡಿಸಿದ ರೇಣುಕಾ

By Mrutyunjaya Kalmat
|
Google Oneindia Kannada News

MP Renukacharya
ದಾವಣಗೆರೆ, ಏ. 26 : ನರ್ಸ್ ಜಯಲಕ್ಷ್ಮಿಯೊಂದಿಗೆ ರಾಜಿ ಮಾಡಿಕೊಂಡು ನಿರಾಳರಾಗಿರುವ ಸಚಿವ ರೇಣುಕಾಚಾರ್ಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮದ್ಯಪಾನ, ಧೂಮಪಾನ ದೇಹಕ್ಕೆ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಈ ಸರಾಯಿ ಮಂತ್ರಿಗಳು ಮಾತ್ರ ಇದಕ್ಕೆ ತದ್ವಿರುದ್ಧ. ಐದು ವರ್ಷದ ಬಾಲಕನಿಗೆ ಮಧ್ಯಪಾನ ಮಾಡಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಸಚಿವರು ಬಾಲಕನಿಗೆ ನೇರವಾಗಿ ಬುದ್ದಿವಾದ ಹೇಳುವುದನ್ನು ಬಿಟ್ಟು ಸ್ವತಃ ಮದ್ಯ ಕುಡಿಯಲು ಕೊಟ್ಟು ಮೋಜು ಅನುಭವಿಸಿದ ಸಚಿವರ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಎನ್‌ಜಿಒವೊಂದು ದೂರು ನೀಡಿದೆ. ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಗ್ರಾಮ ನಾಗಪ್ಪ ಮತ್ತು ಬಸಮ್ಮ ದಂಪತಿಗಳ ಮಗನಾದ ಐದರ ಹರೆಯದ ಈರಣ್ಣನೇ ಬ್ರ್ಯಾಂಡಿ ಈ ರಾಜ. ದೊಡ್ಡ ಕುಡುಕರನ್ನೂ ನಾಚಿಸುವಂತೆ, ನೀರು ಸೇರಿಸದೆ ವಿಸ್ಕಿ, ಬ್ರಾಂಡಿ ಕುಡಿಯುತ್ತಾನೆ. ಅದಕ್ಕೆ ಕಾರಣವೂ ಇದೆ. ಈ ಬಾಲಕ ಅಸ್ತಮಾ ರೋಗದಿಂದ ಬಳಲುತ್ತಿದ್ದಾನೆ.

ಬ್ರ್ಯಾಂಡಿ ಕುಡಿಯುವ ಚಟ ಕಲಿಸಿದ್ದು, ಬಾಲಕನ ಅಜ್ಜ ಹನುಮಂತಪ್ಪ. ಇದೀಗ ಈರಣ್ಣ ಬ್ರ್ಯಾಂಡಿ ಇಲ್ಲದೇ ಜೀವನವೇ ಕಷ್ಟ ಎಂಬಂತಾಗಿದ್ದಾನೆ. ಈ ಚೊಟುದ್ದದ ಪೋರ ನೀರು ಬೆರಸದೆ ವಿಸ್ಕಿ, ಬ್ರಾಂಡಿ ಕುಡಿಯುವ ವಿಷಯ ತಿಳಿದ ಸಚಿವ ರೇಣುಕಾಚಾರ್ಯ ಶನಿವಾರ ಆತನ ಮನೆಗೆ ಭೇಟಿ ನೀಡಿ, ನೀರು ಬೆರಸದೆ ವಿಸ್ಕಿಯನ್ನು ಕುಡಿಯಲು ಕೊಟ್ಟರು. ಅರರೇ, ನೋಡ ನೋಡುತ್ತಲೇ ಹಾಲು ಕುಡಿದಂತೆ ವಿಸ್ಕಿಯನ್ನು ಏರಿಸಿಬಿಟ್ಟಿದ್ದ!

ನಂತರ ಬಾಲಕನ ಸ್ಥಿತಿಗತಿ ವಿಚಾರಿಸಿದ ರೇಣುಕಾಚಾರ್ಯ, ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳೆದುರು ಮದ್ಯಪಾನ ಮಾಡಬಾರದು. ಇದರಿಂದ ಅವರ ಭವಿಷ್ಯ ಹಾಳಾಗಲಿದೆ ಎಂದು ಬುದ್ದಿವಾದ ಹೇಳಿದ್ದಾರೆ. ನಂತರ ಈರಣ್ಣನನ್ನು ರಿಮ್ಯಾಂಡ್ ಹೋಂಗೆ ದಾಖಲಿಸಿದರೆ ಸರ್ಕಾರದ ವತಿಯಿಂದ ಸಂಪೂರ್ಣ ವಿದ್ಯಾಭ್ಯಾಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X