ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಎಸ್ ನಲ್ಲಿ ರವಿಶಂಕರ್ ಗೌರವಾರ್ಥ ದಿನ
ಡೆನ್ ವರ್ ಹಾಗೂ ಮಿಲ್ವಾಕಿ ನಗರಗಳು ಕ್ರಮವಾಗಿ ಏ.20 ಹಾಗೂ ಏ.23 ದಿನಾಂಕವನ್ನು ' ಶ್ರೀ ಶ್ರೀ ರವಿಶಂಕರ್ ದಿನ' ಎಂದು ಘೋಷಣೆ ಮಾಡಿವೆ. ಮಾನವೀಯತೆ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ರವಿಶಂಕರ್ ಗುರೂಜಿ ಅವರು ನೀಡಿರುವ ಕೊಡುಗೆಗೆ ಇದು ನಮ್ಮ ಅಲ್ಪ ಕಾಣಿಕೆ ಎಂದು ಅಲ್ಲಿನ ಆಡಳಿತಗಾರರು ಹೇಳಿದ್ದಾರೆ.
ಡೆನ್ ವರ್ ನ ಮೇಯರ್ ಜಾನ್ ಹಿಕೆನ್ ಲೂಪರ್ ಹಾಗೂ ಮಿಲ್ವಾಕಿಯ ಮೇಯರ್ ಟಾಮ್ ಬರೆಟ್ ಘೋಷಣಾ ಪತ್ರಕ್ಕೆ ಸಹಿ ಹಾಕುತ್ತಾ, ಹರ್ಷದಿಂದ ಈ ದಿನ ಆಚರಿಸಿ ಎಂದು ನಾಗರೀಕರಿಗೆ ತಿಳಿಸಿದರು. ರವಿಶಂಕರ್ ಗುರೂಜಿ ಗೌರವಾರ್ಥ ಅಮೆರಿಕದ ಇನ್ನೂ 12 ನಗರಗಳು ಇಂತಹದ್ದೇ ಆಚರಣೆಯಲ್ಲಿ ತೊಡಗಿವೆ. ಸದ್ಯ ಶ್ರೀ ಶ್ರೀ ರವಿಶಂಕರ್ ಅವರು 21 ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ.
ರವಿಶಂಕರ್ ಗುರೂಜಿ ಆಧ್ಯಾತ್ಮ ಆರ್ಟ್ ಆಫ್ ಲಿವಿಂಗ್ ಅಮೆರಿಕ ಬೆಂಗಳೂರು ravishankar guruji art of living bengaluru
Story first published: Sunday, April 25, 2010, 17:36 [IST]