ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ನಲ್ಲಿ ರವಿಶಂಕರ್ ಗೌರವಾರ್ಥ ದಿನ

By Mahesh
|
Google Oneindia Kannada News

US cities declare Sri Sri Ravi Shankar day
ಬೆಂಗಳೂರು, ಏ.25: ಅಮೆರಿಕದ ಮತ್ತೆರಡು ನಗರಗಳು ಶ್ರೀ ಶ್ರೀ ರವಿಶಂಕರ್ ಅವರ ಗೌರವಾರ್ಥದಿನವನ್ನು ಆಚರಿಸಲು ಮುಂದಾಗಿವೆ ಎಂದು ಕನಕಪುರದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಮೂಲಗಳು ತಿಳಿಸಿವೆ. ಇದರಿಂದ ಅಮೆರಿಕದಲ್ಲಿ ಒಟ್ಟು 14 ನಗರಗಳು' ಶ್ರೀ ಶ್ರೀ ರವಿಶಂಕರ್ ದಿನ'ಅಚರಣೆ ಮಾಡುವುದು ಖಾತ್ರಿಯಾಗಿದೆ.

ಡೆನ್ ವರ್ ಹಾಗೂ ಮಿಲ್ವಾಕಿ ನಗರಗಳು ಕ್ರಮವಾಗಿ ಏ.20 ಹಾಗೂ ಏ.23 ದಿನಾಂಕವನ್ನು ' ಶ್ರೀ ಶ್ರೀ ರವಿಶಂಕರ್ ದಿನ' ಎಂದು ಘೋಷಣೆ ಮಾಡಿವೆ. ಮಾನವೀಯತೆ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ರವಿಶಂಕರ್ ಗುರೂಜಿ ಅವರು ನೀಡಿರುವ ಕೊಡುಗೆಗೆ ಇದು ನಮ್ಮ ಅಲ್ಪ ಕಾಣಿಕೆ ಎಂದು ಅಲ್ಲಿನ ಆಡಳಿತಗಾರರು ಹೇಳಿದ್ದಾರೆ.

ಡೆನ್ ವರ್ ನ ಮೇಯರ್ ಜಾನ್ ಹಿಕೆನ್ ಲೂಪರ್ ಹಾಗೂ ಮಿಲ್ವಾಕಿಯ ಮೇಯರ್ ಟಾಮ್ ಬರೆಟ್ ಘೋಷಣಾ ಪತ್ರಕ್ಕೆ ಸಹಿ ಹಾಕುತ್ತಾ, ಹರ್ಷದಿಂದ ಈ ದಿನ ಆಚರಿಸಿ ಎಂದು ನಾಗರೀಕರಿಗೆ ತಿಳಿಸಿದರು. ರವಿಶಂಕರ್ ಗುರೂಜಿ ಗೌರವಾರ್ಥ ಅಮೆರಿಕದ ಇನ್ನೂ 12 ನಗರಗಳು ಇಂತಹದ್ದೇ ಆಚರಣೆಯಲ್ಲಿ ತೊಡಗಿವೆ. ಸದ್ಯ ಶ್ರೀ ಶ್ರೀ ರವಿಶಂಕರ್ ಅವರು 21 ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X