• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಟಾ : 2012ಕ್ಕೆ ಮತ್ತೊಂದು ಸಣ್ಣ ಕಾರು

By Mrutyunjaya Kalmat
|

ನವದೆಹಲಿ, ಏ. 25 : ದೇಶದ ಅತೀ ದೊಡ್ಡ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ 2012 ಕ್ಕೆ 800 ಸಿಸಿ ಸಾಮರ್ಥ್ಯದ ಸಣ್ಣ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರು ನ್ಯಾನೊ ಮತ್ತು ಇಂಡಿಕಾ ಕಾರುಗಳ ನಡುವಿನ ಅಂತರವನ್ನು ತುಂಬಲಿದೆ ಎಂದು ಹೇಳಲಾಗಿದ್ದು , ಕಂಪನಿ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಇದನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು ಇದಕ್ಕೆ ಡಾಲ್ಫಿನ್ ಎಂದು ಹೆಸರಿಸಲಾಗಿದೆ. ಮೂಲಗಳ ಪ್ರಕಾರ ಈ ಕಾರು 800 ಅಥವಾ 1000 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಮಾರುತಿಯ ವ್ಯಾಗನ್ ಆರ್ ಮತ್ತು ಹ್ಯುಂಡೈ ಐ10 ಕಾರಿಗೆ ಸ್ಪರ್ದಿಯಾಗಲಿದೆ. ಈ ಕಾರಿನ ಬೆಲೆ ರೂ 3.5 ಲಕ್ಷ ರೂಪಾಯಿಗಳಾಗಲಿವೆ ಎನ್ನಲಾಗಿದ್ದು ಈ ಕುರಿತು ಪ್ರತಿಕ್ರಿಯಿಸಲು ಟಾಟಾ ದ ವಕ್ತಾರರು ನಿರಾಕರಿಸಿದ್ದಾರೆ.

ಟಾಟಾ ದ ಹೊಸ ಕಾರು ಏ2 ಶ್ರೇಣಿಯದಾಗಿದ್ದು, ಪ್ರಸ್ತುತ ದೇಶದ ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಏ2 ಶ್ರೇಣಿ ಯ ಪಾಲು ಶೇ 70 ಇದ್ದು ದೇಶದ ವಿವಿಧ ವಾಹನ ತಯಾರಕರು ಸುಮಾರು 20 ಮಾದರಿಗಳನ್ನು ಬಿಡುಗಡೆ ಮಾಡಿದ್ದಾರೆ. ಇವುಗಳಲ್ಲಿ ಮಾರುತಿ ಸುಜುಕಿ ಅಗ್ರ ಸ್ಥಾನ ಹೊಂದಿದೆ. ಏ2 ಶ್ರೇಣಿಯಲ್ಲಿ ಮಾರುತಿ ತನ್ನ 800 ಹಾಗೂ ಆಲ್ಟೋ ಕಾರುಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X