ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಂಡ್ ಟ್ರೀಗೆ ಗುರುತು ಚೀಟಿ ಗುತ್ತಿಗೆ?

By Mahesh
|
Google Oneindia Kannada News

MindTree may bag first UID IT project
ಬೆಂಗಳೂರು, ಏ.25: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರತಿಯೊಬ್ಬರಿಗೂ ವಿಶಿಷ್ಟ ಗುರುತು ಚೀಟಿ ವಿತರಣಾ(UID)ಯೋಜನೆಯ ಅಪ್ಲಿಕೇಷನ್ ಡೆವಲಪ್ ಮೆಂಟ್ (ADM)ಸರ್ವೀಸಸ್ ನ ಗುತ್ತಿಗೆಯನ್ನು ಮೈಂಡ್ ಟ್ರೀ ಕಂಪೆನಿ ಪಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಗುತ್ತಿಗೆಯಲ್ಲಿ ಇನ್ನತರ ಎರಡು ಕಂಪೆನಿಗಳಾದ ಐಬಿಎಂ ಮತ್ತು ಆಕ್ಸೆಂಚರ್ ಗಳನ್ನು ಹಿಂದಿಕ್ಕಿದೆ ಎನ್ನಲಾಗಿದೆ.

ದೇಶದ ಪ್ರಮುಖ ಸಾಫ್ಟವೇರ್ ಕಂಪೆನಿಗಳಾದ ಟಿಸಿ ಎಸ್, ಇನ್ಫೋಸಿಸ್, ವಿಪ್ರೋ ಮತ್ತು ಹೆಚ್ ಸಿಎಲ್ ಟೆಕ್ನಾಲಜೀಸ್ ಕಂಪೆನಿಗಳನ್ನು ತಾಂತ್ರಿಕ ಕಾರಣಗಳಿಂದಾಗಿ ಬಿಡ್ಡಿಂಗ್ ನಿಂದ ಹೊರಗಿಡಲಾಗಿತ್ತು. ಈ ಗುತ್ತಿಗೆಯಲ್ಲಿ ಒಟ್ಟು ಮೂರು ಕಂಪೆನಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು ಇದರಲ್ಲಿ ಮೈಂಡ್ ಟ್ರೀ ವಿಜೇತನಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಏಪ್ರಿಲ್ 26 ರಂದು ಗುತ್ತಿಗೆಯ ವಿಜೇತನನ್ನು ಪ್ರಕಟಿಸಲಿದೆ ಎನ್ನಲಾಗಿದೆ.

ಕಳೆದ ಜನವರಿಯಲ್ಲಿ ಗುರುತು ಚೀಟಿ ಪ್ರಾಧಿಕಾರ ವಿನ್ಯಾಸ, ಅಭಿವೃದ್ದಿ, ಪರೀಕ್ಷೆ, ಬೆಂಬಲ ಮತ್ತು ಸಾಫ್ಟ್ ವೇರ್ ನ ನಿರ್ವಹಣೆಗೆ ಕಂಪೆನಿಗಳಿಂದ ಬಿಡ್ ಗಳನ್ನು ಆಹ್ವಾನಿಸಿತ್ತು. ಇದಕ್ಕೆ ದೇಶದ 19 ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಬಿಡ್ ಸಲ್ಲಿಸಿದ್ದವು. ಇದರಲ್ಲಿ ಪ್ರಾಧಿಕಾರ ಅಂತಿಮವಾಗಿ 3 ಕಂಪೆನಿಗಳನ್ನು ಶಾರ್ಟ್ ಲಿಸ್ಟ್ ಮಾಡಿತ್ತು. ವಿಶಿಷ್ಟ ಗುರುತು ಚೀಟಿಗಳನ್ನು ಆಗಸ್ಟ್ 2010 ರಿಂದ ಫೆಬ್ರವರಿ 2011 ರವರೆಗೆ ಮೊದಲ ಕಂತಿನಲ್ಲಿ ವಿತರಣೆ ಮಾಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ನಂದನ್ ನೀಲೇಕಣಿ ಹೇಳಿದ್ದಾರೆ.

ಮುಂದಿನ 5 ವರ್ಷಗಳಲ್ಲಿ 600 ಮಿಲಿಯನ್ ಗುರುತು ಚೀಟಿಗಳನ್ನು ವಿತರಿಸುವ ಯೋಜನೆ ಹಾಕಿಕೊಂಡಿದ್ದು ಕಳೆದ ವರ್ಷ ಬಜೆಟ್ ನಲ್ಲಿ ಪ್ರಾಧಿಕಾರಕ್ಕೆ 120 ಕೋಟಿ ರೂ ಹಾಗೂ ಈ ವರ್ಷ 1900 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಯೋಜನೆಯಲ್ಲಿ ಒಟ್ಟು ಮಾಹಿತಿ ತಂತ್ರಜ್ಞಾನ ಸೇವೆಗಳಾದ ಕಂಪ್ಯೂಟಿಂಗ್, ಡಾಟಾ ಬೇಸ್, ಸ್ಮಾರ್ಟ್ ಕಾರ್ಡ್ ಇತ್ಯಾದಿಗಳಿಗೆ ಸುಮಾರು 15 ರಿಂದ 20 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಿದ್ದು ಇದರಲ್ಲಿ ಪಾಲ್ಗೊಳ್ಳಲು ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಹೆಚ್ಚಿನ ಆಸಕ್ತಿ ತೋರಿದ್ದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X