ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ : ಲಕ್ಷ್ಮಿ ಮಿತ್ತಲ್ ಮತ್ತೆ ಕುಬೇರ

By Mrutyunjaya Kalmat
|
Google Oneindia Kannada News

Lakshmi Mittal
ಲಂಡನ್, ಏ. 25 : ಭಾರತೀಯ ಮೂಲದ ಕೋಟ್ಯಾಧಿಪತಿ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಬ್ರಿಟನ್ ನಲ್ಲಿ ಅತೀ ದೊಡ್ಡ ಶ್ರೀಮಂತ ಎಂದು ಸಂಡೆ ಟೈಮ್ಸ್ ನ ಸರ್ವೆಯೊಂದು ತಿಳಿಸಿದೆ. ಜಾಗತಿಕ ಆರ್ಥಿಕ ಚೇತರಿಕೆಯಿಂದ ಬ್ರಿಟನ್ ನ 1000 ಶ್ರೀಮಂತರ ಆಸ್ತಿ ಕಳೆದ 12 ತಿಂಗಳಿನಲ್ಲಿ ಶೇ 30 ರಷ್ಟು ಹೆಚ್ಚಳವಾಗಿದೆ ಎಂದು ಪತ್ರಿಕಾ ವರದಿ ಹೇಳಿದೆ.

ಕಳೆದ ವರ್ಷ ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಬ್ರಿಟನ್ ನ ಕೋಟ್ಯಾಧೀಶ್ವರರ ಆಸ್ತಿ ಮೌಲ್ಯದಲ್ಲಿ 155 ಬಿಲಿಯನ್ ಪೌಂಡ್ ಗಳಷ್ಟು ನಷ್ಟವಾಗಿತ್ತು. ಇದರಿಂದ ಬ್ರಿಟನ್ ನ ಕೋಟ್ಯಾಧೀಶ್ವರರ ಸಂಖ್ಯೆ 75 ರಿಂದ 43 ಕ್ಕೆ ಇಳಿದಿತ್ತು. ಈ ವರ್ಷ ಕೋಟ್ಯಾಧೀಶ್ವರರ ಸಂಖ್ಯೆ 53 ಕ್ಕೇರಿದ್ದು, ಆಸ್ತಿ ಮೌಲ್ಯ 77 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಳವಾಗಿದೆ.

ಚೆಲ್ಸಿಯಾ ಫುಟ್ ಬಾಲ್ ಕ್ಲಬ್ ನ ಒಡೆಯ ರೊಮನ್ ಅಬ್ರೊಮೊವಿಚ್ ಆಸ್ತಿ ಮೌಲ್ಯ 7.4 ಬಿಲಿಯನ್ ಪೌಂಡ್ ಗಳಾಗಿದ್ದು ಬ್ರಿಟನ್ ನ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಹುಟ್ಟಿನಿಂದಲೇ ಶ್ರೀಮಂತನಾಗಿರುವ ಡ್ಯೂಕ್ ಆಫ್ ವೆಸ್ಟ್ ಮಿನಿಸ್ಟರ್ ಆಸ್ತಿ 6.7 ಬಿಲಿಯನ್ ಪೌಂಡ್ ಗಳಾಗಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಭಾರತೀಯ ಮೂಲದ ವೇದಾಂತ ರಿಸೋರ್ಸಸ್ ನ ಅದ್ಯಕ್ಷ ಅನಿಲ್ ಅಗರ್ ವಾಲ್ ನ ಆಸ್ತಿ ಮೌಲ್ಯ 6 ಪಟ್ಟು ಹೆಚ್ಚಿ 4.1 ಬಿಲಿಯನ್ ಡಾಲರ್ ಗಳಿಗೇರಿದ್ದು ಶ್ರೀಮಂತರ ಪಟ್ಟಿಯಲ್ಲಿ 60 ನೇ ಸ್ಥಾನದಿಂದ 10 ನೇ ಸ್ಥಾನಕ್ಕೆ ಏರಿಕೆಯಾಗಿದೆ. ಪತ್ರಿಕೆ ಪ್ರಕಟಿಸಿರುವ ವಾರ್ಷಿಕ ಶ್ರೀಮಂತರ ಪಟ್ಟಿಯಲ್ಲಿ ಭೂಮಿ, ಸ್ಥಿರಾಸ್ಥಿ, ರೇಸ್ ಕುದುರೆ, ಕಂಪನಿಗಳಲ್ಲಿ ಹೊಂದಿರುವ ಷೇರು ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು ಬ್ಯಾಂಕ್ ಖಾತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X