ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಹಳ್ಳಿಗಳಿಗೂ ಹೈಸ್ಪೀಡ್ ಇಂಟರ್ನೆಟ್

By Mahesh
|
Google Oneindia Kannada News

Sachin Pilot
ನವದೆಹಲಿ,ಏ.25: 1995 ರಲ್ಲಿ 100 ಮಂದಿಗೆ ಕೇವಲ ಶೇ.1.5 ರಷ್ಟಿದ್ದ ದೂರವಾಣಿಗಳ ಸಂಖ್ಯೆ ಇಂದು ಶೇ.50 ರಷ್ಟು ತಲುಪಿದೆ. ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ, ಮತ್ತು ಬೆಂಗಳೂರಿನಲ್ಲಿ ದೂರವಾಣಿ ಸಾಂದ್ರತೆ ಶೇ.130-140 ರಷ್ಟಿದೆ. ಯೂರೋಪ್ ಹಾಗೂ ಅಮೇರಿಕಾದಲ್ಲೂ ಇಷ್ಟೇ ಸಾಂದ್ರತೆ ಇದೆ. ಈ ಮಾಹಿತಿಯನ್ನು ಟೊರೊಂಟೊದಲ್ಲಿ ಪತ್ರಕರ್ತರೊಂದಿಗೆ ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಅವರು ಹಂಚಿಕೊಂಡರು.

ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ದೂರವಾಣಿ ಸಾಂದ್ರತೆ ಈಗ ಶೇ.18-20 ರಷ್ಟಿದ್ದು , ಮುಂದಿನ ಮೂರು ವರ್ಷಗಳಲ್ಲಿ ದೇಶದ ಪ್ರತೀ ಹಳ್ಳಿಗೂ ಹೈ ಸ್ಪೀಡ್ ಇಂಟರ್ ನೆಟ್ ಸೇವೆ ಒದಗಿಸಲಾಗುವುದು ಎಂದರು. ಬುಡಕಟ್ಟು, ಗಡಿ ಹಾಗೂ ಈಶಾನ್ಯ ರಾಜ್ಯಗಳು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಪರ್ಕ ಉತ್ತಮಗೊಳಿಸಲು 11000 ದೂರ ಸಂಪರ್ಕ ಗೋಪುರಗಳನ್ನು ನಿರ್ಮಿಸಲಾಗುವುದು ಎಂದು ಸಚಿನ್ ಹೇಳಿದರು.

ಮಾಹಿತಿ ಹಾಗೂ ತಂತ್ರ ಜ್ಞಾನ ರಂಗದ ಕ್ರಾಂತಿಯ ಪ್ರಯೋಜನ ದೆಹಲಿ, ಮುಂಬೈ, ಮಹಾನಗರಗಳಿಗಷ್ಟೇ ಸೀಮಿತವಾಗಬಾರದು, ಇದು ಪ್ರತೀ ಭಾರತೀಯನಿಗೂ ತಲುಪಬೇಕು ಎಂದು ಅವರು ಹೇಳಿದರು. ಭಾರತೀಯ ಅಂಚೆ ಇಲಾಖೆಯನ್ನೂ ಲಾಭದಾಯಕವನ್ನಾಗಿಸಲು ರೈಲು, ಬಸ್ಸುಗಳ, ಟಿಕೆಟ್ ಬುಕಿಂಗ್, ಪಾಸ್ ಪೋರ್ಟ್ ನವೀಕರಣ, ಬಿಲ್ ಗಳ ಪಾವತಿ ಸೇವೆಯನ್ನು ಜಾರಿಗೊಳಿಸಲಾಗುವುದು ಎಂದೂ ಅವರು ಹೇಳಿದರು. ತಾವು ಕೆನಡಾಗೆ ಬಂದಿರುವುದು ಬರೇ ಒಪ್ಪಂದ ಮಾಡಿಕೊಳ್ಳಲಿಕ್ಕೆ ಅಲ್ಲ ಬದಲಿಗೆ ಕೆನಡಾದ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹ ನೀಡುವುದಕ್ಕೂ ಎಂದ ಸಚಿವರು ದೇಶದಲ್ಲಾಗುತ್ತಿರುವ ಬದಲಾವಣೆಗಳನ್ನು ಹೊರಗಿನ ಜನರಿಗೆ ತಿಳಿಸಬೇಕಾಗಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X