ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕ್ಫ್ ಮಂಡಳಿಗೆ ಮಹಿಳಾ ಸಿಇಒ

By Mahesh
|
Google Oneindia Kannada News

Karnataka Wakf Board gets first women CEO Sadia Sultana
ಬೆಂಗಳೂರು, ಏ.23: ಪ್ರಪಥಮ ಬಾರಿಗೆ ವಕ್ಫ್ ಮಂಡಳಿಗೆ ಮಹಿಳಾ ಸಿಇಒ ಆಗಿ ಸಾದಿಯಾ ಸುಲ್ತಾನಾ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಅಲ್ಪಸಂಖ್ಯಾತ ಹಾಗೂ ವಕ್ಫ್ ಖಾತೆ ಸಚಿವ ಮುಮ್ತಾಜ್ ಅಲಿಖಾನ್ ಸುದ್ದಿಗಾರರಿಗೆ ತಿಳಿಸಿದರು.ವಕ್ಫ್ ಮಂಡಳಿಯ ಪ್ರಪ್ರಥಮ ಮಹಿಳಾ ಸದಸ್ಯೆ ಎಂಬ ಗೌರವ ಬೆಂಗಳೂರಿನ ಪತ್ರಕರ್ತೆ ಶೀಮಾ ಮೊಹ್ಸೀನ್ ಅವರಿಗೆ ಸಲ್ಲುತ್ತದೆ.

ವಕ್ಫ್ ಮಂಡಳಿ ಸೂಪರ್ ಸೀಡ್ ಹಾಗೂ ವಿಂಡ್ಸರ ಮ್ಯಾನರ್ ವಿವಾದಗಳು ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಹಜ್ ಯಾತ್ರಾರ್ಥಿಗಳಲ್ಲಿ ಮೂರು ಬಾರಿ ಅರ್ಜಿಸಲ್ಲಿಸಿದವರಿಗೆ ಆದ್ಯತೆ ನೀಡುವಂತೆ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು. ಥಣಿಸಂದ್ರದಲ್ಲಿ ಹಜ್ ಭವನ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸಚಿವ ಮುಮ್ತಾಜ್ ತಿಳಿಸಿದರು.

ಗೋಹತ್ಯೆ ನಿಷೇಧ: ಕೇವಲ ಧಾರ್ಮಿಕ ಕಾರಣಕ್ಕಾಗಿ ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತಿಲ್ಲ. ಆರ್ಥಿಕವಾಗಿಯೂ ಇದು ಬಾಧಿಸುತ್ತದೆ. ಇದಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ರೂಪಿಸಬೇಕು. ಸಸ್ಯಾಹಾರ ಒಳ್ಳೆಯದು, ಪ್ರವಾದಿಗಳು ಸಸ್ಯಾಹಾರಿಗಳಾಗಿದ್ದರು. ಹಾಗಂತ, ಯಾರ ಹೊಟ್ಟೆ ಮೇಲೂ ಹೊಡೆಯಬಾರದು.ಕಾನೂನಿನ ದುರುಪಯೋಗಬಾರದು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X