ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಮೇಯರ್ ಆಗಿ ಎಸ್ಕೆ ನಟರಾಜ್

By Mrutyunjaya Kalmat
|
Google Oneindia Kannada News

SK Nataraj
ಬೆಂಗಳೂರು, ಏ. 23 : ಕೊನೆಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂತನ ಸಾರಥಿಗಳು ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆ ಸಾರಕ್ಕಿ ವಾರ್ಡ್ ನ ಎಸ್ ಕೆ ನಟರಾಜ್ ಹಾಗೂ ಬೆನ್ನಿಗಾನಹಳ್ಳಿಯ ದಯಾನಂದ ಅವರು ಮೇಯರ್ ಮತ್ತು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೂರೂವರೆ ವರ್ಷಗಳ ಅಧಿಕಾರಿಗಳ ದರ್ಬಾರಿಗೆ ಇತಿಶ್ರೀ ಹಾಡಲಾಯಿತು.

ಬಿಬಿಎಂಪಿಗೆ ಒಟ್ಟು 198 ಸದಸ್ಯರನ್ನು ಹೊಂದಿದೆ. ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆಗೆ ಆಯ್ಕೆಯಾದ ನೂತನ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ಆರಂಭವಾಗಿದೆ. ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ, ಸಚಿವರಾದ ಆರ್ ಆಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು ಸಮ್ಮುಖದಲ್ಲಿ ನಗರದ ಎಲ್ಲ ಶಾಸಕರು ಗುರುವಾರ ಸಭೆ ಸೇರಿ ಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಯಿತು.

ಬಿಬಿಎಂಪಿಗೆ ಪ್ರಥಮ ಮೇಯರ್ ಎನಿಸಿರುವ ಎಸ್ ಕೆ ನಟರಾಜ್, ಬಿಎಂಪಿ ಲೆಕ್ಕದಲ್ಲಿ 44ನೇ ಮೇಯರ್ ಆಗಿದ್ದಾರೆ. ಅದೇ ರೀತಿ ಬಿಬಿಎಂಪಿ ಮೊದಲ ಉಪಮೇಯರ್ ಎಂಬ ಗೌರವಕ್ಕೆ ದಯಾನಂದ ಪಾತ್ರರಾದರು. ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 111 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ ಬಿಬಿಎಂಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X