ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಜನರ ವಲಸೆ ಅಭಿವೃದ್ಧಿಯ ಸಂಕೇತ

By Prasad
|
Google Oneindia Kannada News

Indian city life is becoming costlier
ಹೊಸದಿಲ್ಲಿ, ಏ. 23 : ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಭಾರತದ ನಗರ ಜೀವನ ಮತ್ತಷ್ಟು ಸಂಕೀರ್ಣವಾಗುತ್ತ ಸಾಗುತ್ತಿದೆ. ಒಂದೆಡೆ ಗ್ರಾಮೀಣ ಪ್ರದೇಶದಿಂದ ನಾಗರಿಕರು ನಗರದತ್ತ ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಅಗಾಧವಾಗಿ ಬೆಳೆಯುತ್ತಿರುವ ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ದೂರದೃಷ್ಟಿಯಿಂದ ಚಿಂತನೆ ಮಾಡಬೇಕಿದೆ.

ಜಾಗತಿಕ ಅದ್ಯಯನ ಸಂಸ್ಥೆ ಮೆಕಿನ್ಸಿ ಗ್ಲೋಬಲ್‌ ನಡೆಸಿರುವ ಅಧ್ಯಯನದ ಪ್ರಕಾರ, 2030ರ ಹೊತ್ತಿಗೆ ನಗರಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು 97.35 ಲಕ್ಷ ಕೋಟಿ ರುಪಾಯಿಗಳನ್ನು (2.2 ಟ್ರಿಲಿಯನ್ ಡಾಲರ್) ಖರ್ಚು ಮಾಡಬೇಕಿದೆ ಎಂದು ಹೇಳಿದೆ. ಇದರಲ್ಲಿ ಸುಮಾರು 53.1 ಲಕ್ಷ ಕೋಟಿ ರುಪಾಯಿಗಳನ್ನು ಕುಡಿಯುವ ನೀರು, ಒಳ ಚರಂಡಿ, ಸಾರಿಗೆ ಹಾಗೂ ಮಿತವ್ಯಯದ ಮನೆಗಳ ನಿರ್ಮಾಣಕ್ಕೆ ವೆಚ್ಚ ಮಾಡಬೇಕಾಗಿದೆ. ಇನ್ನೆರಡು ದಶಕಗಳಲ್ಲಿ ಸುಮಾರು 1.47 ಟ್ರಿಲಿಯನ್ ಜನ ನಗರಗಳಲ್ಲಿ ವಾಸ ಮಾಡಲಿದ್ದಾರೆ ಎಂದು ಸಂಸ್ಥೆ ಅಂದಾಜಿಸಿದೆ.

ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಜನರ ವಲಸೆ ಅಭಿವೃದ್ದಿ ಹೊಂದುತ್ತಿರುವ ದೇಶಗಳ ಲಕ್ಷಣ. 2030ರಲ್ಲಿ ನಗರ ಪ್ರದೇಶಗಳು ಶೇ 70ರಷ್ಟು ಹೊಸ ಹುದ್ದೆಗಳನ್ನು ಸೃಷ್ಟಿಸಲಿದ್ದು, ದೇಶಾದ್ಯಂತ ತಲಾ ಆದಾಯದಲ್ಲಿ ನಾಲ್ಕು ಪಟ್ಟು ಹೆಚ್ಚಳ ಆಗಲಿದೆ ಎಂದೂ ವರದಿ ಹೇಳಿದೆ.

ನಗರಗಳಿಗಾಗಿ ವ್ಯಯಿಸಬೇಕಾದ ವೆಚ್ಚ ಕೂಡ ನಿರೀಕ್ಷೆ ಮೀರಿ ಹೆಚ್ಚುತ್ತಿದೆ. ತಲಾ ಆದಾಯ ಹೆಚ್ಚಬೇಕಾದ ಅವಶ್ಯಕತೆ ಎದ್ದು ಕಾಣುತ್ತಿದೆ. ಜಿಡಿಪಿ ದರದ ಶೇ.2ರಷ್ಟನ್ನು ನಗರ ಪ್ರದೇಶಗಳಲ್ಲಿ ವೆಚ್ಚ ಮಾಡಬೇಕಾಗಿದ್ದು ಈಗ ಶೇ 0.5ರಷ್ಟನ್ನು ಮಾತ್ರ ವೆಚ್ಚ ಮಾಡಲಾಗುತ್ತಿದೆ. ನಗರ ಪ್ರದೇಶಗಳ ವಾರ್ಷಿಕ ವೆಚ್ಚ 2015ರಲ್ಲಿ 30 ಬಿಲಿಯನ್ ಡಾಲರ್, 2020ರಲ್ಲಿ 60 ಬಿಲಿಯನ್ ಡಾಲರ್ ಮತ್ತು 2030ರಲ್ಲಿ 90 ಬಿಲಿಯನ್ ಡಾಲರ್ ತಲುಪಲಿದೆ ಎಂದೂ ಅದು ಹೇಳಿದೆ.

ಈ ಹೂಡಿಕೆಯ ಶೇ 80ರಷ್ಟು ಭಾಗ ಆಂತರಿಕವಾಗೇ ಲಭ್ಯವಾಗಲಿದೆ ಎಂದು ವರದಿ ಹೇಳಿದ್ದು, ತಮಿಳುನಾಡು, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಹೆಚ್ಚಿನ ಜನಸಂಖ್ಯೆ ನಗರ ಪ್ರದೇಶಗಳಲ್ಲಿ ವಾಸ ಮಾಡಲಿದೆ ಎಂದು ಹೇಳಿದೆ. ಹೆಚ್ಚಿನ ಸೇವೆಗೆ ಅನುಕೂಲವಾಗುವಂತೆ ಸಂವಿಧಾನದ 74ನೇ ತಿದ್ದುಪಡಿಯನ್ನು ಅನುಷ್ಠಾನಗೊಳಿಸಿ ನಗರಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವಂತೆಯೂ ಅದು ಸೂಚಿಸಿದೆ. ಮಹಾನಗರಗಳಲ್ಲಿ 20-25 ಸ್ಯಾಟಲೈಟ್ ಟೌನ್ ಶಿಪ್ ಗಳನ್ನು ಸ್ಥಾಪಿಸುವ ಮೂಲಕ ಪ್ರವಾಸೀ ಹಾಗೂ ಇತರ ಉದ್ಯಮದ ಕೇಂದ್ರೀಕೃತ ನಗರಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದೂ ವರದಿ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X