ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ ಸ್ಫೋಟಕ್ಕೆ ಕೊಪ್ಪದಲ್ಲಿ ಸಂಚು?

By Mahesh
|
Google Oneindia Kannada News

Pune Blast
ಬೆಂಗಳೂರು, ಏ.23: ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟಕ್ಕೆ ಕರ್ನಾಟಕದ ಚಿಕ್ಕಮಗಳೂರಿನ ಕೊಪ್ಪದಲ್ಲಿ ಸಂಚು ರೂಪಿಸಲಾಗಿತ್ತು ಎಂಬ ಸುದ್ದಿ ಹೊರಬಿದ್ದಿದೆ. ಭಟ್ಕಳ ಮೂಲದ ಯಾಸಿನ್ ನನ್ನು ಪುಣೆ ಸ್ಫೋಟದ ಪ್ರಮುಖ ರುವಾರಿ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಇತ್ತೀಚೆಗೆ ಖಚಿತಪಡಿಸಿತ್ತು. ಅಲ್ಲದೆ, ಯಾಸಿನ್ ಗೆ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಸ್ಥಾಪಕ ರಿಯಾಜ್ ಭಟ್ಕಳ ಸಂಬಂಧಿ ಇರಬಹುದು ಎಂದು ತನ್ನ ವರದಿಯಲ್ಲಿ ಎಟಿಎಸ್ ತಿಳಿಸಿತ್ತು.

ಚಿಕ್ಕಮಗಳೂರಿನಲ್ಲಿ ಸಂಚು ರೂಪಿಸಿದ್ದಲ್ಲದೆ, ಬಾಂಬ್ ತಯಾರಿಕೆ ತರಬೇತಿಯನ್ನೂ ನೀಡಲಾಗಿತ್ತು. ಇವರಿಗೆ ಉಗ್ರ ಯಾಸಿನ್ ಭಟ್ಕಳ ಮಾರ್ಗದರ್ಶಿಯಾಗಿದ್ದ. ಯಾಸಿನ್ ಹಲವು ವರ್ಷಗಳಿಂದ ಕೊಪ್ಪ, ಚಿಕ್ಕಮಗಳೂರಿನ ಸಂಪರ್ಕ ಹೊಂದಿದ್ದಾನೆ.ಪುಣೆ ಸ್ಫೋಟಕ್ಕೆ ಇಲ್ಲಿಂದಲೇ ಬಾಂಬ್ ತಯಾರಿ ನಡೆದಿರುವ ಸಾಧ್ಯತೆಯಿದೆ ಎಂದು ಎಟಿಎಸ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪುಣೆಯ ಕೋರೆಗಾನ್ ಪಾರ್ಕ್ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ 17 ಜನ ಅಮಾಯಕರು ಮೃತರಾಗಿದ್ದರು.ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಹಾಗೂ ಸಿಮಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಈ ದುಷ್ಕೃತ್ಯ ನಡೆಸಿತ್ತು.ರಿಯಾಜ್, ಯಾಸಿನ್ ಪ್ರಮುಖ ಆರೋಪಿಗಳಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X