ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅಕ್ಕಿಗೆ ಭೇಷ್ ಎಂದ ಬಿಲ್

By Shami
|
Google Oneindia Kannada News

Bill Gates
ವಾಷಿಂಗ್ಟನ್, ಏ. 23 : ಭತ್ತದ ಬೆಳೆ ಸಮೃದ್ಧಿಗಾಗಿ ಭಾರತದಲ್ಲಿ ನಾನಾ ಬಗೆಯ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅತಿವೃಷ್ಟಿ ಅನಾವೃಷ್ಟಿಯ ಆವೇಶದ ಭಾರತದಲ್ಲಿ ಪ್ರಕೃತಿಯ ಆಟಾಟೋಪಗಳನ್ನು ಅರಿತು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಬೇಕಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಅಭಿವೃದ್ದಿ ಪಡಿಸಿರುವ ಪ್ರವಾಹ ಪ್ರತಿರೋಧ ಹೊಂದಿರುವ ಅಕ್ಕಿಯ ಗುಣ ಮತ್ತು ಹಸಿವು ನೀಗಿಸುವಲ್ಲಿ ಅದು ವಹಿಸುವ ಪಾತ್ರ ಪ್ರಶಂಸನೀಯವಾಗಿದೆ.

ಈ ಅಕ್ಕಿಯ ಗುಣವನ್ನು ವಿಶ್ವದ ಸಾಫ್ಟ್ ವೇರ್ ದಿಗ್ಗಜ ಬಿಲ್ ಗೇಟ್ಸ್ ಕೊಂಡಾಡಿದ್ದಾರೆ. ತಳಿಯ ಬಳಕೆಯಿಂದ ರೈತರ ಬೆವರಿಗೆ ಹೆಚ್ಚು ಬೆಲೆ ಸಿಗುವುದೆಂಬ ಆಶಾವಾದ ಅವರದ್ದು. ಭಾರತಕ್ಕೆ ಆಗಾಗ ಬಂದು ಹೋಗಿ ಮಾಡುವ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದಾಗ ವೈಶಿಷ್ಟ್ಯಪೂರ್ಣವಾದ ಈ ಅಕ್ಕಿಯನ್ನು ನೋಡಿದ್ದರು.

ಜಾಗತಿಕ ಹಸಿವು ಮತ್ತು ಬಡತನ ನಿರ್ಮೂಲನೆಗಾಗಿ ಗೇಟ್ಸ್ 800 ಮಿಲಿಯನ್ ಡಾಲರುಗಳ ಜಾಗತಿಕ ನೆರವನ್ನು ನೀಡುವ ಒಂದು ಸಮಾರಂಭದಲ್ಲಿ ಮಾತನಾಡಿದ ಅವರು ಸರ್ಕಾರದ ಬೆಂಬಲ ಹಾಗೂ ರೈತರ ಆಸಕ್ತಿಯಿಂದ ಈ ಅಕ್ಕಿಯ ಉತ್ಪಾದನೆ ಐದು ಪಟ್ಟು ಹೆಚ್ಚಳವಾಗಿದೆ ಎಂದು ಶ್ಲಾಘಿಸಿದರು. ಇದೇ ವೇಳೆ, ತಮ್ಮ ಬಿಲ್ ಗೇಟ್ಸ್ ಫೌಂಡೇಷನ್ ಕೃಷಿ ಅಭಿವೃದ್ದಿಯಲ್ಲಿ ಸಣ್ಣ ಮಹಿಳಾ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದೂ ಅವರು ಹೆಮ್ಮೆಯಿಂದ ನುಡಿದರು.

ಕಳೆದ ವರ್ಷ ನಡೆದ ಜಿ8 ಶೃಂಗ ರಾಷ್ಟ್ರಗಳ ಸಭೆಯಲ್ಲಿ ವಿಶ್ವ ಬ್ಯಾಂಕಿನ ವತಿಯಿಂದ ಬಡತನ ನಿರ್ಮೂಲನ ಯೋಜನೆಗೆ 22 ಬಿಲಿಯನ್ ಡಾಲರ್ ಗಳ ನೆರವು ನಿಧಿಯನ್ನು ಸ್ಥಾಪಿಸುವ ಭರವಸೆ ನೀಡಿದ್ದವು. ಈ ಭರವಸೆಯ ಹಿನ್ನೆಲೆಯಲ್ಲಿ ಗೇಟ್ಸ್ ಫೌಂಡೇಷನ್ 800 ಮಿಲಿಯನ್ ಡಾಲರ್ ನಿಧಿಯನ್ನು ಸ್ಥಾಪಿಸಿದೆ.

ನಾನಾ ದೇಶಗಳು ಮಾಡಿದ ಅಂಥ ವಾಗ್ದಾನಗಳ ಅಂಕಿಅಂಶ ಇಂತಿದೆ : ಅಮೇರಿಕಾ 475 ಮಿಲಿಯನ್ ಡಾಲರ್ , ಕೆನಡಾ 230 ಮಿಲಿಯನ್ ಡಾಲರ್ , ಸ್ಫೇನ್ 95 ಮಿಲಿಯನ್ ಡಾಲರ್, ದಕ್ಷಿಣ ಕೊರಿಯಾ 50 ಮಿಲಿಯನ್ ಹಾಗೂ ಬಿಲ್ ಮತ್ತು ಮೆಲಿಂಡ ಗೇಟ್ಸ್ ಫೌಂಡೇಷನ್ 30 ಮಿಲಿಯನ್ ಡಾಲರ್ ನೆರವನ್ನು ಸ್ವಪ್ರೇರಣೆಯಿಂದ ಪ್ರಕಟಿಸಿದ್ದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X