ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರು ಬೆಂಗಳೂರು ಮೇಯರ್ ಎಸ್ಕೆ ನಟರಾಜ್

By Prasad
|
Google Oneindia Kannada News

Bengaluru Mayor SK Nataraj
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾಗಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಎಸ್ ಕೆ ನಟರಾಜ್ ಅವರ ಬಯೋಡೇಟಾ ಇಲ್ಲಿದೆ. ಬೆಂಗಳೂರನ್ನು ಸುಂದರ ಬೆಂಗಳೂರನ್ನಾಗಿಸುವ ಗುರುತರ ಜವಾಬ್ದಾರಿ ವಾರ್ಡ್ ನಂ. 178 ಸಾರಕ್ಕಿಯಿಂದ ಆಯ್ದು ಬಂದಿರುವ ನಟರಾಜ್ ಮೇಲಿದೆ. ಹಾಗೆಯೇ ಬೆಂಗಳೂರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಬೆಂಗಳೂರು ಮೇಯರ್ ಗಮನಕ್ಕೆ ತಂದು ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡಿಸಿಕೊಳ್ಳಬೇಕಾದ ಹೊಣೆಗಾರಿಕೆ ಪ್ರಜ್ಞಾವಂತ ನಾಗರಿಕರ ಮೇಲಿದೆ.

ಇವರು ಬೆಂಗಳೂರು ಮೇಯರ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈಗಿನ ಸಾರಕ್ಕಿ ಬೆಂಗಳೂರು ಮಹಾನಗರದ ಹಳೆಯದಾದ ಗ್ರಾಮ. ಎಸ್.ಕೆ. ನಟರಾಜ್‌ರವರು ಮೂಲತಃ ಇದೇ ಗ್ರಾಮದವರಾಗಿದ್ದು, ಇವರ ವಂಶಸ್ಥರೂ ಕೂಡಾ ಇಲ್ಲಿಯವರೇ ಆಗಿದ್ದಾರೆ. ಹುಟ್ಟು, ಬೆಳವಣಿಗೆ ಮತ್ತು ವಿದ್ಯಾಭ್ಯಾಸ ಎಲ್ಲವೂ ಸಾರಕ್ಕಿ ಗ್ರಾಮದಲ್ಲೇ ಆಗಿದ್ದು, ಮೊದಲಿನಿಂದಲೂ ಸಮಾಜಸೇವೆಯಲ್ಲಿ ತೊಡಗಿಕೊಂಡವರು.

ಅಂದಿನ ವಿಧಾನಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಜೆ. ಶ್ರೀನಿವಾಸರೆಡ್ಡಿ ಹಾಗೂ ಸಾರಕ್ಕಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೈ.ವಿ. ಅಣ್ಣಯ್ಯರ ಮಾರ್ಗದರ್ಶನ ಹಾಗು ತಮ್ಮ ರಾಜಕೀಯ ಗುರು ಶಾಸಕ ಎಂ. ಶ್ರೀನಿವಾಸ್ ನಾಯಕತ್ವದಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಎಸ್.ಕೆ. ನಟರಾಜ್ 1982ರಲ್ಲಿ ಜನತಾ ಪಕ್ಷವನ್ನು ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಇದಕ್ಕೂ ಮೊದಲೇ ಆಲಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ರಾಜಕೀಯ ಕ್ಷೇತ್ರದ ಅನುಭವವನ್ನು ಪಡೆದುಕೊಂಡಿದ್ದರು. ನಂತರ ಇದೇ ಸಂಘಕ್ಕೆ ಅಧ್ಯಕ್ಷರಾಗಿಯೂ ನೇಮಕಗೊಂಡರು.

ಇದಾದನಂತರ ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ 1986ರಿಂದ 2010ರತನಕ ನಿರ್ದೇಶಕರಾದರು. ಹಿಂದುತ್ವ ಮತ್ತು ಹಿಂದೂ ಸಂಸ್ಕೃತಿಯನ್ನು ಎತ್ತಿಹಿಡಿಯುವತ್ತ ಕಾರ್ಯೋನ್ಮುಖವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್) ಸಂಘದೊಂದಿಗೆ ಸಂಪರ್ಕ ಇರಿಸಿಕೊಂಡು ತದನಂತರದಲ್ಲಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

1992ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಎಸ್.ಕೆ. ನಟರಾಜ್ ಪಕ್ಷದ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡದ್ದಲ್ಲದೆ, ಸಾರಕ್ಕಿ ಸೇರಿದಂತೆ ಹಿಂದಿನ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಒಂದು ನೆಲೆ ಒದಗಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ತತ್ಪರಿಣಾಮ 1996ರಲ್ಲಿ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆ.ಪಿ.ನಗರ ವಾರ್ಡ್ ಸೇರಿದಂತೆ ಉತ್ತರಹಳ್ಳಿ ಕ್ಷೇತ್ರದ ಬಹುತೇಕ ವಾರ್ಡ್‌ಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ತರುವಲ್ಲಿ ನೆರವಾಗಿದ್ದಾರೆ.

1996ರ ಪಾಲಿಕೆ ಚುನಾವಣೆಯಲ್ಲಿ ಜೆ.ಪಿ. ನಗರ ವಾರ್ಡ್‌ನಿಂದ ಭಾರತೀಯ ಜನತಾ ಪಾರ್ಟಿಯ ಸದಸ್ಯರಾಗಿ ಮೊಟ್ಟಮೊದಲಬಾರಿಗೆ ಆಯ್ಕೆಯಾದ ಎಸ್.ಕೆ.ನಟರಾಜ್ ಈ ಕ್ಷೇತ್ರವನ್ನು ಇಲ್ಲಿಯತನಕ ತಮ್ಮ ಹಿಡಿತದಲ್ಲೇ ಇರಿಸಿಕೊಂಡಿದ್ದಾರೆ. 2001ರ ಚುನಾವಣೆಯಲ್ಲೂ ಈ ವಾರ್ಡ್‌ನಿಂದ ಗೆದ್ದುಬಂದರು. ಇದೀಗ 2010ರ ಬೃಹತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಿಂದಿನ ಜೆ.ಪಿ. ನಗರ ವಾರ್ಡ್‌ನ ಹಲವು ಪ್ರದೇಶಗಳನ್ನು ಒಳಗೊಂಡಂತೆ ರಚನೆಯಾದ ಸಾರಕ್ಕಿ ವಾರ್ಡ್ (178)ನಿಂದಲೂ ಗೆದ್ದು "ಹ್ಯಾಟ್ರಿಕ್" ಸಾಧಿಸಿದ್ದಾರೆ.

ಸಾರಕ್ಕಿ ಮತ್ತು ಸುತ್ತ-ಮುತ್ತಲ ಪ್ರದೇಶಗಳ ದೇವಾಲಯಗಳ ಧರ್ಮದರ್ಶಿಗಳಾಗಿ, ಉತ್ತಮ ಕ್ರೀಡಾಪಟುವಾಗಿದ್ದ ನಟರಾಜ್ ವಿವಿಧ ಕ್ರೀಡಾ ಕ್ಲಬ್ ಗಳ ಅಧ್ಯಕ್ಷರಾಗಿ, ಕನ್ನಡದ ಬಗ್ಗೆ ಪ್ರೀತಿ ಹೊಂದಿರುವ ಅವರು ಕನ್ನಡ ಸಂಘಟನೆಗಳ ಕಟ್ಟಾಳವಾಗಿ ಕಾರ್ಯ ನಿರ್ವಹಿಸಿದ್ದಾರೆ.

ವ್ಯಕ್ತಿಗತ ವಿವರ

ಹೆಸರು : ಎಸ್.ಕೆ. ನಟರಾಜ್
ವಯಸ್ಸು : 53 ವರ್ಷಗಳು

ವಿಳಾಸ :

ನಂ 144, ಲಕ್ಷ್ಮೀನಿವಾಸ,
12ನೇ ಕ್ರಾಸ್, ಸಾರಕ್ಕಿ,
ಜೆ.ಪಿ.ನಗರ 1ನೇ ಹಂತ,
ಬೆಂಗಳೂರು- 560 078.
ದೂ. 080-2664 4382
ಮೊ. 98450 13157

ಕುಟುಂಬ :
ಪತ್ನಿ ಶ್ರೀಮತಿ ಲಕ್ಷ್ಮೀ, ಪುತ್ರಿಯರು ವಿನಿತ, ತೇಜಸ್ವಿನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X