ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹೀಂದ್ರಾದಿಂದ ವಿದ್ಯುತ್ ಚಾಲಿತ ಸ್ಕೂಟರ್

By Prasad
|
Google Oneindia Kannada News

Mahindra to manufacture electronic scooter
ಮುಂಬೈ, ಏ. 22 : ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೀಂದ್ರಾ ಮತ್ತು ಮಹೀಂದ್ರಾ ವಿದ್ಯುತ್ ಚಾಲಿತ ಸ್ಕೂಟರ್ ಗಳ ತಯಾರಿಕೆಗೆ ಮುಂದಾಗಿದ್ದು ಎರಡು ವರ್ಷಗಳ ನಂತರ ಮಾರುಕಟ್ಟೆಗೆ ಲಗ್ಗೆ ಹಾಕಲಿವೆ. ಕಳೆದ ವರ್ಷ ದ್ವಿಚಕ್ರ ವಾಹನಗಳ ಮಾರುಕಟ್ಟೆಗೆ 125 ಸಿಸಿ ಸ್ಕೂಟರ್ ಗಳನ್ನು ಕಂಪನಿ ಬಿಡುಗಡೆ ಮಾಡಿತ್ತು .

2008ರ ಜುಲೈನಲ್ಲಿ ಪುಣೆ ಮೂಲದ ಕೈನೆಟಿಕ್ ಮೋಟಾರ್ ಕಂಪೆನಿಯನ್ನು 110 ಕೋಟಿ ರುಪಾಯಿಗಳಿಗೆ ಖರೀದಿಸಿದ ಮಹೀಂದ್ರಾ ಸೆಪ್ಟೆಂಬರ್ 2009ರಲ್ಲಿ ರೊಡಿಯೊ, ಡ್ಯೂರೊ ಮತ್ತು ಫ್ಲೈಟ್ ಎಂಬ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿತ್ತು. ಕಂಪನಿ 2009-10ರಲ್ಲಿ 70,000 ಸ್ಕೂಟರ್ ಗಳನ್ನು ಮಾರಾಟ ಮಾಡಿತ್ತು.

ಮಹೀಂದ್ರ ದ್ವಿಚಕ್ರ ವಾಹನ ವಿಭಾಗದ ಅದ್ಯಕ್ಷ ಅನೂಪ್ ಮಾಥುರ್ ಅವರು ವಿದ್ಯುತ್ ಚಾಲಿತ ಸ್ಕೂಟರ್ ಗಳ ತಯಾರಿಕೆ ಪ್ರಗತಿಯಲ್ಲಿದ್ದು ಮುಂದಿನ ಎರಡು ವರ್ಷಗಳ ನಂತರ ಬಿಡುಗಡೆ ಮಾಡುವ ಸಾದ್ಯತೆ ಇದೆ ಎಂದರು. ಮಾಚ್ 2011ರ ವೇಳೆಗೆ ಮೋಟಾರ್ ಸೈಕಲ್ ಗಳನ್ನು ಬಿಡುಗಡೆ ಮಾಡಲಿದೆ ಎಂದು ವಿವರಿಸಿದರು.

ದೇಶದಲ್ಲಿ ವಾರ್ಷಿಕ 8 ಮಿಲಿಯನ್ ಮೋಟಾರ್ ಸೈಕಲ್ ಗಳು ಮಾರಾಟವಾಗುತಿದ್ದು, ಉತ್ತಮ ಮಾರುಕಟ್ಟೆ ಇದೆ ಎಂದರು. ಇದಕ್ಕಾಗಿ ಇಟಲಿಯ ಎಂಜಿನ್ಸ್ ಎಂಜಿನೀರಿಂಗ್ ಮತ್ತು ತೈವನ್ ನ ಸ್ಯಾನ್ಯಂಗ್ ಕಂಪೆನಿ ಜತೆ ಸಹಯೋಗಕ್ಕೆ ಮಾತುಕತೆ ನಡೆದಿದೆ ಎಂದು ಹೇಳಿದರು.

ಪಿತಂಪುರದಲ್ಲಿರುವ ಮಹೀಂದ್ರಾದ ಉತ್ಪಾದನಾ ಘಟಕ ವಾರ್ಷಿಕ 5 ಲಕ್ಷ ಘಟಕಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೈನೆಟಿಕ್ ಮೋಟಾರ್ ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಕೆಯ ತಂತ್ರಜ್ಞಾನ ಹೊಂದಿದ್ದು ವಾರ್ಷಿಕ 0.1 ಮಿಲಿಯ ಘಟಕಗಳ ಮಾರುಕಟ್ಟೆ ಹೊಂದಿದೆ. ದೇಶದ ವಿದ್ಯುತ್ ಚಾಲಿತ ಸ್ಕೂಟರ್ ಗಳ ಮಾರುಕಟ್ಟೆಯಲ್ಲಿ ಎಲೆಕ್ಟ್ರೋಥರ್ಮ್ ಇಂಡಿಯಾ ಮತ್ತು ಟಿವಿಎಸ್ ಮೋಟಾರ್‍ಸ್ ಮುಂಚೂಣಿಯಲ್ಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X