ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿ ಪತ್ನಿ ಬ್ಯಾಂಕ್ ಖಾತೆಗೆ ಕನ್ನ!!
ಸದ್ಯ ಮೇ 3ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಯುವಕ ಮುಂಬೈ ಎಂಎಚ್ ಬಿ ಕಾಲೋನಿಯ ನಿವಾಸಿ ಪ್ರೇಮಾನಂದ್ ಗಿರಿಕಾರ್. ಈ ವ್ಯಕ್ತಿ ಜನಾರ್ಧನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣ ರೆಡ್ಡಿ ಅವರ ಆಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯನ್ನು ಮುಂಬೈಗೆ ವರ್ಗಾಯಿಸಲು ನಕಲಿ ಸಹಿ, ವಿಳಾಸ ಮತ್ತು ಇತರ ದಾಖಲೆಗಳನ್ನು ಬ್ಯಾಂಕ್ ಗೆ ಸಲ್ಲಿಸಿದ್ದಾನೆ.
ಗಣಿಧಣಿಗಳಿಗೆ ಸಂಬಂಧಪಟ್ಟ ಮತ್ತು ಕೋಟ್ಯಾಂತರ ರೂಪಾಯಿ ವ್ಯವಹಾರದ ಖಾತೆ ಇದಾಗಿರುವುದರಿಂದ ಬ್ಯಾಂಕ್ ಸಿಬ್ಬಂದಿ ಕೂಡಲೇ ಗಣಿ ಕಂಪೆನಿಯ ಹಣಕಾಸು ನಿರ್ವಾಹಕರಿಗೆ ಮಾಹಿತಿ ನೀಡಿದರು. ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.
Comments
ಬಳ್ಳಾರಿ ಗಣಿಗಾರಿಕೆ ಕ್ರೈಂ ಜರ್ನಾದನ ರೆಡ್ಡಿ ಮುಂಬೈ ಆಕ್ಸಿಸ್ ಬ್ಯಾಂಕ್ axis bank janardhana reddy crime beat mumbai hacking
Story first published: Thursday, April 22, 2010, 11:28 [IST]