ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ವಿಶ್ವ 2000ಗೆ ಭಾರತದ 56 ಕಂಪೆನಿಗಳು

By Mahesh
|
Google Oneindia Kannada News

56 Indian companies among Forbes' Global 2000 list
ನವದೆಹಲಿ, ಏ.22 : ಭಾರತದ 56 ಕಂಪೆನಿಗಳು ಫೋರ್ಬ್ಸ್ ನ ಗ್ಲೋಬಲ್ 2000 ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇದರಲ್ಲಿ ಚೀನಾದ 113 ಕಂಪೆನಿಗಳೂ ಸೇರಿವೆ. ಅಮೆರಿಕದ ಪ್ರಮುಖ ವಾಣಿಜ್ಯ ಮ್ಯಾಗಜೀನ್ ಫೋಬ್ಸ್ ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಚ್ಚರಿಯ ವಿಷಯವೆಂದರೆ, ಈ ಪಟ್ಟಿಯಲ್ಲಿ ಮುಂದುವರಿದ ದೇಶಗಳ ಕಂಪೆನಿಗಳ ಸಂಖ್ಯೆ ಕ್ಷೀಣಿಸುತ್ತಿದೆ.

62 ದೇಶಗಳ ಕಂಪೆನಿಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದ್ದು ಅಮೇರಿಕಾದ 515 ಕಂಪೆನಿಗಳು ಜಪಾನ್ ನ 210 ಕಂಪೆನಿಗಳು ಸೇರಿವೆ. ದೇಶದ ಅತೀ ದೊಡ್ಡ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಗೆ ಪಟ್ಟಿಯಲ್ಲಿ 126 ನೇ ಸ್ಥಾನ ದೊರೆತಿದೆ. ಎಸ್ ಬಿ ಐ (130) ಒ ಎನ್ ಜಿ ಸಿ (155) ಐಸಿಐಸಿಐ ಬ್ಯಾಂಕ್ (282) ಇಂಡಿಯನ್ ಆಯಿಲ್ (313) ಎನ್ ಟಿ ಪಿ ಸಿ (341) ಟಾಟಾ ಸ್ಟೀಲ್ (345) ಭಾರ್ಥಿ ಏರ್ ಟೆಲ್ (471) ಸೇಲ್ (502) ಎಲ್ ಅಂಡ್ ಟಿ (548) ಯುಕೋ ಬ್ಯಾಂಕ್ (1910) ಸ್ಥಾನ ಪಡೆದಿದೆ. ಅತೀ ದೊಡ್ಡ ಕಂಪೆನಿಗಳ ಮಾರಾಟ, ಲಾಭಾಂಶ, ಆಸ್ತಿ, ಮತ್ತು ಮಾರುಕಟ್ಟೆ ಮೌಲ್ಯ ಆಧರಿಸಿ ರ‌್ಯಾಂಕಿಂಗ್ ನೀಡಲಾಗಿದೆ.

ವಿಶ್ವದ 2000 ಅತೀ ದೊಡ್ಡ ಕಂಪೆನಿಗಳು 30 ಟ್ರಿಲಿಯನ್ ಡಾಲರ್ ಗಳಷ್ಟು ಆದಾಯ ಹೊಂದಿದ್ದು, 1.4 ಟ್ರಿಲಿಯನ್ ಡಾಲರ್ ಗಳಷ್ಟು ಲಾಭ, 124 ಟ್ರಿಲಿಯನ್ ಡಾಲರ್ ಗಳಷ್ಟು ಆಸ್ತಿ, ಮತ್ತು 31 ಟ್ರಿಲಿಯನ್ ಡಾಲರ್ ಗಳಷ್ಟು ಮಾರುಕಟ್ಟೆ ಮೌಲ್ಯ ಹೊಂದಿವೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಬ್ಯಾಂಕುಗಳು ಉತ್ತಮ ಬೆಳವಣಿಗೆ ದಾಖಲಿಸಿದ್ದು 308 ಬ್ಯಾಂಕ್ ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ತೈಲ ಮತ್ತು ಅನಿಲ ವಲಯದ 115 ಕಂಪೆನಿಗಳು , ವಿಮಾ ಕಂಪೆನಿಗಳು ಹಾಗೂ ಜೈವಿಕ ತಂತ್ರಜ್ಞಾನ ಕಂಪೆನಿಗಳು ಇವೆ. ಸುಮಾರು 130 ಕಂಪೆನಿಗಳು ಕಳೆದ 5 ವರ್ಷಗಳಿಂದ ಸತತವಾಗಿ ವಾರ್ಷಿಕ ಶೇ. 28 ಕ್ಕೂ ಅಧಿಕ ಬೆಳವಣಿಗೆ ದಾಖಲಿಸುತಿದ್ದು ಶೇರುದಾರರಿಗೆ ಶೇ.20ರಷ್ಟು ಲಾಭಾಂಶ ನೀಡುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X