ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿರು ಬಿಸಿಲಿನಲ್ಲಿ ದುಡಿವ ಬಾಲಕಾರ್ಮಿಕರು!

By Mahesh
|
Google Oneindia Kannada News

 Child Labour existence in Savanur
ಸವಣೂರ, ಏ.22 : 50 ವರ್ಷಗಳಿಂದ ಅಭಿವೃದ್ದಿ ವಂಚಿತವಾಗಿರುವ ಸವಣೂರ ಪಟ್ಟಣವನ್ನು 5 ವರ್ಷಗಳನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವ ಅತ್ಯುತ್ಸಾಹಕ್ಕೆ ಒಳಗಾಗಿರುವ ಸವಣೂರ ಪುರಸಭೆ, ಅಬಾಲವೃದ್ದರನ್ನೂ ತನ್ನ ಉದ್ದೇಶಗಳ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿದೆ.

ಕ್ಷೇತ್ರದ ಶಾಸಕ ರಾಜ್ಯದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರ ಕೃಪಾ ಕಟಾಕ್ಷಕ್ಕೆ ಒಳಗಾಗಿರುವ ಸವಣೂರ ಪುರಸಭೆಗೆ ದಾಖಲೆಯ ಪ್ರಮಾಣದಲ್ಲಿ ಅನುದಾನದ ಒಳಹರಿವು ಆರಂಭಗೊಂಡಿದೆ. ಪರಿಣಾಮ ಕಾಮಗಾರಿಗಳ ಕಳಪೆತನವನ್ನೂ ಲೆಕ್ಕಿಸದ ಪುರಸಭೆಯ ಅಧಿಕಾರಿಗಳು ಹಾಗೂ ಪುರಪಿತ್ರುಗಳು, ಏಕಾಏಕಿ ನಗರದ ಎಲ್ಲ ವಾರ್ಡ್ ಗಳಲ್ಲಿಯೂ ಅಭಿವೃದ್ದಿ ಪಥ ನಿರ್ಮಿಸುತ್ತಿದ್ದಾರೆ.

ಇದರೊಂದಿಗೆ ಕೂಲಿ ಕಾರ್ಮಿಕರ ಕೊರತೆಯನ್ನು ಸರಿದೂಗಿಸುವ ಭರದಲ್ಲಿ ಬಾಲ ಕಾರ್ಮಿಕರನ್ನೂ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ಮಾರ್ಚ್ -ಏಪ್ರಿಲ್ ತಿಂಗಳ ಬಿರು ಬಿಸಲಿನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹೊಸ ಅನುದಾನದ ನಿರೀಕ್ಷೆಯಲ್ಲಿರುವ ಸ್ಥಳೀಯ ಪುರಸಭೆ, ಎಲ್ಲ ಕಾನೂನು ಚೌಕಟ್ಟುಗಳನ್ನೂ ಮೀರುತ್ತಿದ್ದರೂ, ದಿಕ್ಕು ತಪ್ಪಿದ ನಾವೆಯಂತಾಗಿರುವ ಸವಣೂರಿನ ಆಡಳಿತ ಯಂತ್ರ ಮಾತ್ರ ಗಾಢ ಮೌನಧರಿಸಿದೆ. ನಗರದ ಅಭಿವೃದ್ದಿಗೆ 10 ಕೋಟಿ ರೂಗಳ ಆರಂಭಿಕ ಅನುದಾನ ನೀಡಿರುವ ಸಚಿವ ಬಸವರಾಜ ಬೊಮ್ಮಾಯಿ, ಅಧಿಕಾರಿಗಳ ವರ್ತನೆಗೂ ಅಂಕುಶ ಹಾಕಬೇಕಾಗಿರುವ ಅಗತ್ಯ ಎದುರಾಗಿದೆ.

English summary
Local children are often employed in the public sector infrastructure development activities, particularly after their families have become displaced or lost agriculture land. A report on Child Labour existence in Savanur taluk, Haveri. ಬಿರು ಬಿಸಿಲಿನಲ್ಲಿ ದುಡಿವ ಬಾಲಕಾರ್ಮಿಕರು!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X