ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಚ್ ನಡೆಸಿದ್ದು ರೈಟ್ ಡಿಸಿಜನ್

By Mrutyunjaya Kalmat
|
Google Oneindia Kannada News

VS Acharya
ಬೆಂಗಳೂರು, ಏ. 21 : ಕಳೆದ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ ನಂತರವೂ ಪಂದ್ಯ ನಡೆಯಲು ಅನುಮತಿ ನೀಡಿದ್ದು ಸರಿಯಾದ ಕ್ರಮ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಸಮರ್ಥಿಸಿಕೊಂಡರು. ಈ ಕೃತ್ಯದ ಹಿಂದೆ ರಾಜ್ಯ ಸರಕಾರದ ಮೇಲೆ ಕೆಟ್ಟ ಹೆಸರು ಯತ್ನವೂ ಅಡಗಿದೆ ಎಂದು ಆವರು ಆರೋಪಿಸಿದರು.

ಮಂಗಳವಾರ ನಗರದಲ್ಲಿ ನಡೆದ ಅಗ್ನಿಶಾಮಕ ಹಾಗೂ ಗೃಹರಕ್ಷಕ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 45 ಸಾವಿರ ಪ್ರೇಕ್ಷಕರಿದ್ದ ಕ್ರೀಡಾಂಗಣದಲ್ಲಿ ಪಂದ್ಯ ನಿಂತುಹೋಗಿದ್ದರೆ ಕಾಲ್ತುಳಿತದಂತ ಭಾರಿ ಅನಾಹುತ ಸಂಭವಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಂಡ ಕ್ರಮ ಶ್ಲಾಘನೀಯ ನಿರ್ಧಾರ ಎಂದು ಪ್ರಶಂಸಿಸಿದರು.

ಕೇವಲ ಒಂದು ಪಂದ್ಯ ಸ್ಥಳಾಂತರವಾದರೆ ಅದರಿಂದ ನಷ್ಟವೇನೂ ಆಗುವುದಿಲ್ಲ. ಅದರ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ. ಭದ್ರತೆಯ ಕಾರಣದಿಂದ ಪಂದ್ಯ ಸ್ಥಳಾಂತರವಾಗಿಲ್ಲ. ನಿಜವಾದ ಕಾರಣಗಳು ಐಪಿಎಲ್ ಪದಾಧಿಕಾರಿಗಳಿಗೇ ಗೊತ್ತು. ಪ್ರಕರಣದಲ್ಲಿ ಬೆಟ್ಟಿಂಗ್ ದಂಧೆಯ ಕೈವಾಡ ಕೂಡ ಇದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಚಾರ್ಯ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X