ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೀಯ ಭಾಷೆಗೆ ಬೇಕು ಸವಲತ್ತುಗಳು!

By Mahesh
|
Google Oneindia Kannada News

CIIL, Mysore
ಮೈಸೂರು, ಏ.20: ಶಾಸ್ತ್ರೀಯ ಭಾಷೆ ಕನ್ನಡಕ್ಕೆ ಸಿಗಬೇಕಿರುವ ಸೌಲಭ್ಯ ವಿಸ್ತರಣೆ ಕುರಿತು 'ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ' (ಸಿಐಐಎಲ್) ಮೈಸೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಮುಂದಾಗಿದೆ. ಎರಡು ದಿನಗಳ ಈ ಸಮಾಲೋಚನೆ ಮಂಗಳವಾರಮುಕ್ತಾಯವಾಗಲಿದೆ.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್, ನಿರ್ದೇಶಕ ಮನು ಬಳಿಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಾಹಿತಿಗಳಾದ ಲಿಂಗದೇವರು ಹಳೇಮನೆ, ಡಾ. ಮರುಳ ಸಿದ್ದಪ್ಪ, ಸಂಶೋಧಕರಾದ ಟಿವಿ ವೆಂಕಟಾಚಲ ಶಾಸ್ತ್ರಿ, ಎಂ ಚಿದಾನಂದ ಮೂರ್ತಿ ಸೇರಿದಂತೆ 50ಕ್ಕೂ ಅಧಿಕ ಜನ ಭಾಗವಹಿಸಿದ್ದಾರೆ.

ಸಿಐಐಎಲ್ ನನಿರ್ದೇಶಕ ಡಾ. ರಾಜೇಶ್ ಸಚ್ ದೇವ್ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಶಾಸ್ತ್ರೀಯ ಬಹಷೆಯ ಸೌಲಭ್ಯ ದೊರಕುವ ಹಾದಿಯಲ್ಲಿ ಸೂಕ್ತ ರೂಪುರೇಷೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದಿದೆ . ಕನ್ನಡಕ್ಕೆ ಅಗತ್ಯವಾದ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ವಿವಿಧ ಇಲಾಖೆ, ಸಂಸ್ಥೆಗಳು, ವಿದ್ವಾಂಸರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಚರ್ಚೆಯಾದ ವಿಷಯಗಳು:
ಕನ್ನಡ ಮಾತನಾಡುವ ದೇಶದ ವಿವಿಧ ಭಾಗಗಳಲ್ಲಿ ಕನ್ನಡ ಪೀಠಗಳನ್ನು ಆರಂಭಿಸುವುದು. ಶಾಸ್ತ್ರೀಯ ಭಾಷೆ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ಸಮಿತಿ ರಚನೆ. ದೇಶದ ವಿವಿಧ ವಿವಿಗಳಲ್ಲಿ ಕನ್ನಡ ಪೀಠ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಇವೇ ಮುಂತಾದ ವಿಷಯಗಳು ಚರ್ಚಿತವಾದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X