ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಹುಲಿಮರಿಗಳ ಸಂಖ್ಯೆ ವೃದ್ಧಿ

By Mahesh
|
Google Oneindia Kannada News

Tiger Census
ಬೆಂಗಳೂರು, ಏ.19: ದೇಶಾದ್ಯಂತ ಹುಲಿಗಳು ಅಳಿವಿನಂಚಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ಆತಂಕದ ನಡುವೆಯೇ ಆಶಾಕಿರಣವೊಂದು ಮೂಡಿದೆ. ಕರ್ನಾಟಕದ ನಾಗರಹೊಳೆ, ಬಂಡೀಪುರ ಸೇರಿ ದಂತೆ ದೇಶದ ರಾಷ್ಟ್ರೀಯ ಉದ್ಯಾನವನಗಳಲ್ಲಿ 112 ಹುಲಿಮರಿಗಳು ಕಂಡುಬಂದಿವೆ.

ಕೆಲವು ತಿಂಗಳುಗಳ ಹಿಂದೆ ನಡೆಸಿದ ಹುಲಿಗಣತಿಯಲ್ಲಿ 112 ಹುಲಿ ಮರಿಗಳು ಕಂಡುಬಂದಿವೆ. ಆತಂಕದ ನಡುವೆಯೇ ಇದೊಂದು ಸಂತಸದ ಸಂಗತಿ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ. 112 ಹುಲಿ ಮರಿಗಳ ಪೈಕಿ ನಾಗರಹೊಳೆಯಲ್ಲಿ 10,
ಬಂಡೀಪುರದಲ್ಲಿ 12, ಆಂಧ್ರಪ್ರದೇಶದ ನಾಗಾರ್ಜುನ ಸಾಗರದಲ್ಲಿ 10, ಮಧ್ಯಪ್ರದೇಶದ ಕನ್ಹಾದಲ್ಲಿ ಅತಿ ಹೆಚ್ಚು 22 ಮರಿಗಳು ಪತ್ತೆಯಾಗಿವೆ.

ಮಧ್ಯಪ್ರದೇಶದ ಬಂದ್ವಾಘರ್ ನಲ್ಲಿ 12 ಹಾಗೂ ಪೀಂಚ್‌ನಲ್ಲಿ 10 ಹುಲಿ ಮರಿಗಳು ಜನಗ ಣತಿಗಾರರ ಕಣ್ಣಿಗೆ ಬಿದ್ದಿವೆ. ದಟ್ಟ ಕಾಡು ಹೊಂದಿರುವ ಮಹಾರಾಷ್ಟ್ರದ ತಡೋಬಾದಲ್ಲಿ 13, ಉತ್ತರ ಪ್ರದೇಶದ ದೂದ್ವಾದಲ್ಲಿ 16 ಹಾಗೂ ರಾಜಸ್ಥಾನದ ರಣತಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ 10 ಹುಲಿ ಮರಿಗಳು ತಮ್ಮ ತಾಯಿಯೊಂದಿಗೆ ಆಟವಾಡುತ್ತಿರುವುದು ಕಂಡುಬಂದಿದೆ.

ದೇಶದಲ್ಲಿ ಒಟ್ಟು 39 ಹುಲಿ ಸಂರಕ್ಷಿತ ಉದ್ಯಾನವನಗಳಿವೆ. 2006ರ ಗಣತಿಯ ಪ್ರಕಾರ ದೇಶದಲ್ಲಿ 1411 ಹುಲಿಗಳಿವೆ. ಈ ಬಾರಿಯ ಗಣತಿಯಲ್ಲಿ ಒಂದು ತಿಂಗಳಿನಿಂದ 2 ವರ್ಷದ ಹುಲಿ ಮರಿಗಳನ್ನು ಪರಿಗಣಿಸಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X