ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಪಂ ಚುನಾವಣೆ:ಬಿಜೆಪಿಯತ್ತ ಚಿತ್ತ

By *ಡಾ. ಬಾಲಕೃಷ್ಣ ಹೆಗಡೆ, ಶಿವಮೊಗ್ಗ
|
Google Oneindia Kannada News

Shimoga: Gram Panchayat election BJP is favourite
ಶಿವಮೊಗ್ಗ,ಏ.19: ರಾಜ್ಯದಲ್ಲಿ ಬರಲಿರುವ ಗ್ರಾಮ ಪಂಚಾಯತಿ ಚುನಾವಣೆ ಬಿ.ಜೆ.ಪಿ.ಸಿದ್ದಾಂತಗಳ ಪರವಾಗಿರುತ್ತಿದ್ದು ಮತದಾರರು ಆ ಪಕ್ಷದ ಕಡೆ ಹೆಚ್ಚಿನ ಒಲುವು ತೋರಿಸುತ್ತಿದ್ದಾರೆಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಎನ್.ಭಾನುಪ್ರಕಾಶ್ ತಿಳಿಸಿದರು.

ಅವರು ಜಿಲ್ಲಾ ಕಚೇರಿಯಲ್ಲಿ ಕಾರ್ಯಕಾರಿಣಿ ಸಭೆ ಹಾಗೂ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಹಕಾರಿ ಸಂಘಗಳು ರಾಜಕೀಯ ರಹಿತವಾಗಿರಬೇಕು. ಗ್ರಾಮ ಪಂಚಾಹಿತರು ಸಹಕಾರಿಯುಕ್ತವಾಗಿರಬೇಕು ಎಂಬುದು ಬಿ.ಜೆ.ಪಿಯ ಆಶಯ. ಆ ನಿಟ್ಟಿನಲ್ಲಿ ಪಕ್ಷ ಕಾಲ ಕಾಲಕ್ಕೆ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಏನಾದರೂ ತರಬೇತಿ ನೀಡುವ ಪಕ್ಷವಿದ್ದರೆ ಅದು ಬಿ.ಜೆ.ಪಿ.ಯೊಂದೇ ಎಂದು ಬಣ್ಣಿಸಿದ ಅವರು ತಮ್ಮ ಪಕ್ಷ ಹೇಳಿದ್ದನ್ನು ಮಾಡುವ ಪಕ್ಷ ಎಂದು ಹೇಳಿಕೊಂಡರು. ಇತ್ತೀಚೆಗೆ ಕೇಂದ್ರದಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ ಬಿ.ಜೆ.ಪಿಯ ಕೂಸು ಎಂದ ಅವರು ಸಮಾಜದ ಎಲ್ಲ ಸ್ತರಗಳಲ್ಲಿ ಅಭಿವೃದ್ಧಿ ಸಾಧಿಸುವುದು ತಮ್ಮ ಪಕ್ಷದ ಗುರಿ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯತಿಗಳು ಪ್ರಜಾಪ್ರಭುತ್ವದ ಮೂಲ ಬೇರು ಎಂದು ಅದರ ಮಹತ್ವ ವಿವರಿಸಿದ ಭಾನುಪ್ರಕಾಶ್ ಬೇರು ಗಟ್ಟಿಯಾಗಿದ್ದರೆ ಮರ ಗಟ್ಟಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ.ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಕಾರ್ಯಕರ್ತರಿಗೆ ತಿಳುವಳಿಕೆ ನೀಡುವ ಪದ್ಧತಿಯನ್ನು ತಮ್ಮ ಪಕ್ಷ ಹೊಂದಿದೆ ಎಂದು ತಿಳಿಸಿದರು.

ವಿಕೇಂದ್ರೀಕರಣದಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ತಮ್ಮ ಪಕ್ಷ ನಂಬಿದೆ. ಇದರಿಂದ ಗ್ರಾ.ಪಂ.ಚುನಾವಣೆಗೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು. ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ಆರ್.ಕೆ.ಸಿದ್ದರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಪ್ರಮುಖರಾದ ಆಯನೂರು ಮಂಜುನಾಥ್, ಸಿಂಧ್ಯಾ, ಮಾಧ್ಯಮ ಪ್ರಮುಖ ಅರುಣ ಡಿ.ಎಸ್. ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X