ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬ್ಯಾಟಿಂಗ್, ತರೂರ್ ಹಿಟ್ ವಿಕೆಟ್

By Mahesh
|
Google Oneindia Kannada News

Shashi Tharoor
ನವದೆಹಲಿ/ಮುಂಬೈ, ಏ.18 :ಕೇಂದ್ರವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ರಾತ್ರಿ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಮನೆಯಲ್ಲಿ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಶಶಿ ತರೂರ್ ಅವರ ತಲೆದಂಡ ಮಾಡಲು ನಿರ್ಧಾರ ಕೈಗೊಳ್ಳಲಾಯಿತು. ಐಪಿಎಲ್ ವಿವಾದಕ್ಕೆ ಮೊದಲ ಬಲಿಯಾದ ಶಶಿ ತರೂರ್ ಅವರು, ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿಗೆ ಸಲ್ಲಿಸಿದ್ದಾರೆ.ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಎರಡು ಗಂಟೆಗಳಿಗೂ ಅಧಿಕ ಕಾಲ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರಧಾನಿ ಮನ ಮೋಹನ್ ಸಿಂಗ್, ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ, ಎಕೆ ಅಂಟನಿ ಹಾಗೂ ಅಹ್ಮದ್ ಪಟೇಲ್ ಭಾಗವಹಿಸಿದ್ದರು. ಎಲ್ಲರೂ ಒಕ್ಕೊರಲಿನಿಂದ ಶಶಿ ತರೂರ್ ಅವರನ್ನು ಸಂಪುಟದಿಂದ ಹೊರ ಹಾಕುವುದೇ ಸೂಕ್ತ ಎಂದು ನಿರ್ಣಯ ಕೈಗೊಂಡರು ಎನ್ನಲಾಗಿದೆ.

ಮೋದಿ ಕಥೆ: ಇದಕ್ಕೂ ಮುನ್ನ ಕೊಚ್ಚಿ ಐಪಿಎಲ್ ತಂಡ ಖರೀದಿ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಲು ಭಾನುವಾರ ರಾತ್ರಿ ಸುಮಾರು 45 ನಿಮಿಷಗಳ ಕಾಲ ಪ್ರಧಾನಿ ಅವರೊಡನೆ ಶಶಿ ಚರ್ಚೆ ನಡೆಸಿದ್ದರು. ಸುನಂದಾ ಕೂಡ ಕೊಚ್ಚಿ ತಂಡದ ಷೇರುಗಳನ್ನು ತ್ಯಜಿಸಿದ್ದರು. ಇತ್ತ ಲಲಿತ್ ಮೋದಿ ಹಣೆಬರಹ ಏ.25 ರಂದು ನಡೆಯುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿದೆ. ಆದರೆ, 2012 ರ ವರೆಗೂ ಅವರನ್ನು ಐಪಿಎಲ್ ಆಯುಕ್ತರನ್ನಾಗಿ ನೇಮಕ ಮಾಡಿರುವುದರಿಂದ ಅವರ ತಲೆದಂಡ ಸಾಧ್ಯವಿಲ್ಲದಿದ್ದರೂ, ಅಧಿಕಾರವನ್ನು ಮೊಟಕುಗೊಳಿಸಬಹುದು. ಏ.23 ರಂದು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಐಪಿಎಲ್ ತಂಡಗಳ ಆಯವ್ಯಯದ ವಿವರ ನೀಡುವ ತಯಾರಿಯಲ್ಲಿದ್ದಾರೆ ಮೋದಿ. ಇತ್ತ ಬಿಜೆಪಿ ಸುನಂದಾ, ಶಶಿ ಇಬ್ಬರೂ ತಪ್ಪಿಸ್ಥರು ಎಂದು ಒಪ್ಪಿಕೊಂಡಂತಾಗಿದೆ. ಎಲ್ಲಾ ತಂಡಗಳ ತನಿಖೆ ನಡೆಯಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X