ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಕೈ ಸೇರಿದ ವಿದ್ಯಾರ್ಥಿಗಳ ಉಪಗ್ರಹ

By Mahesh
|
Google Oneindia Kannada News

STUDSAT handed over to ISRO for launch
ಬೆಂಗಳೂರು, ಏ.18: ಮೊಟ್ಟಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಗಳೇ ತಯಾರಿಸಿದ 'ಸ್ಟುಡ್ ಸ್ಯಾಟ್' ಉಪಗ್ರಹದ ಪ್ರತಿಕೃತಿಯನ್ನು ರಾಜ್ಯಪಾಲರು ಇಸ್ರೋಗೆ ಹಸ್ತಾಂತರಿಸಿತು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 675 ಗ್ರಾಂ ತೂಕದ ಮಿನಿ 'ಸ್ಟುಡ್ ಸ್ಯಾಟ್' ಉಪಗ್ರಹವನ್ನು ಇಸ್ರೋ ಕೇಂದ್ರದ ಅಧಿಕಾರಿಗಳಿಗೆ ನೀಡಲಾಯಿತು.

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ನೇತೃತ್ವದಲ್ಲಿ ದೇಶದ ಆರು ಕಾಲೇಜುಗಳ ಸಹಯೋಗದಲ್ಲಿ ಈ ಉಪಗ್ರಹವನ್ನು ನಿರ್ಮಿಸಲಾಗಿದೆ. ವಿವಿಧ ಕಾಲೇಜುಗಳ 40 ವಿದ್ಯಾರ್ಥಿಗಳ ತಂಡ ಈ ಉಪಗ್ರಹ ತಯಾರಿಕೆಯಲ್ಲಿ ಕಾರ್ಯನಿರ್ವಹಿಸಿದೆ. ಉಪಗ್ರಹ ಕಾರ್ಟೋ ಸ್ಯಾಟ್2ಬಿ ಉಪಗ್ರಹದ ಜೊತೆಗೆ ಇದೇ ತಿಂಗಳಲ್ಲಿ ಪಿಎಸ್ ಎಲ್ ವಿ 14 ಉಡಾವಣಾ ನೌಕೆಯಲ್ಲಿ ಕಕ್ಷೆ ಸೇರಲಿದೆ.

ಕಾಲೇಜಿನಲ್ಲೇ ನಿಯಂತ್ರಣ ಕೇಂದ್ರ ಇರುವುದು ವಿಶೇಷ ಸಂಗತಿಯಾಗಿದೆ. ಬೆಂಗಳೂರಿನ ರಾಮಯ್ಯ ತಾಂತ್ರಿಕ ಕಾಲೇಜು, ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್, ಬಿಎಂಎಸ್ ತಾಂತ್ರಿಕ ಕಾಲೇಜ್ ಗಳ ಜೊತೆಯಲ್ಲಿ ಹೈದರಬಾದ್ ನ ಕೆಲವು ಕಾಳೇಜುಗಳು ಉಪಗ್ರಹ ತಯಾರಿಕೆಯಲ್ಲಿ ಪಾಲ್ಗೊಂಡಿದ್ದವು. ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್, ಇಸ್ರೋ ಕೇಂದ್ರ ನಿರ್ದೇಶಕ ಡಾ. ಪಿಕೆ ಅಲೆಕ್ಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X