ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾರ್ಗೆಟ್ ಚಿನ್ನಸ್ವಾಮಿ ಕ್ರೀಡಾಂಗಣ ಗೇಟ್ ನಂ1

By Mahesh
|
Google Oneindia Kannada News

Fourth explosive device defused at Bangalore cricket stadium
ಬೆಂಗಳೂರು, ಏ.18: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಶನಿವಾರ ಎರಡು ಸ್ಫೋಟಗಳು ಸಂಭವಿಸಿದ ಬೆನ್ನಲ್ಲೇ, ಇಂದು ಗೇಟ್ ನಂ1 ಬಳಿ ಮತ್ತೊಂದು ಬಾಂಬ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯದಳದವರು ಬಾಂಬ್ ಅನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದಾರೆ. ಒಟ್ಟಾರೆಯಾಗಿ ಕ್ರೀಡಾಂಗಣ ಸುತ್ತ ಇಡಲಾಗಿದ್ದ ನಾಲ್ಕು ಬಾಂಬ್ ಇದಾಗಿದ್ದು, ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.

ಎಂಜಿ ರಸ್ತೆಯ ಗಾಂಧೀ ಪ್ರತಿಮೆ ಬಳಿಯ ಬಸ್ ಸ್ಟಾಪ್ ಬಳಿ ಹಳದಿ ಸಿಮೆಂಟ್ ಚೀಲದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಸ್ಫೋಟಕ ವಸ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ1 ಬಳಿ ಸಿಕ್ಕಿರುವ ಈ ಸ್ಫೋಟಕ ವಸ್ತು ವಿವರಗಳನ್ನು ತಿಳಿಯಲು ಸ್ಥಳಕ್ಕೆ ಶ್ವಾನದಳ, ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಕಚ್ಚಾ ಬಾಂಬ್ ಇರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರೂ, ಮಾಧ್ಯಮ ಪ್ರತಿನಿಧಿಗಳನ್ನು ಶಂಕಿತ ಸ್ಥಳದಿಂದ ದೂರ ಇರುವಂತೆ ಆದೇಶಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಬಾಂಬ್ ಪತ್ತೆ ಆಗಿದ್ದು ಹೇಗೆ? :
ಕಬ್ಬನ್ ಪಾರ್ಕ್ ಠಾಣೆಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.1 ನಿಂದ 50 ಮೀಟರ್ ದೂರದಲ್ಲಿ ನಾಲ್ಕನೇ ಬಾಂಬ್ ಇರಿಸಲಾಗಿದೆ ಎಂದು ಹೇಳಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯ ದಳದವರು ಬಾಂಬ್ ಅನ್ನು ನಿಷ್ಖ್ರಿಯಗೊಳಿಸಿದ್ದಾರೆ. ಇದೊಂದು ಕಚ್ಚಾಬಾಂಬ್ ಎಂದು ತಿಳಿದುಬಂದಿದೆ. ಇದರಲ್ಲಿ ಯಾವುದೇ ಟೈಮರ್ ಅಳವಡಿಸಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X